ಬಳ್ಳಾರಿ: ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿ 4 ತಿಂಗಳೇ ಕಳೆದು ಹೋಗ್ತಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ದರ್ಶನ್ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ದರ್ಶನ್ ಗಾಗಿ ಜೈಲಿಗೆ ಹೊಸ ಕಾಟ್, ಬೆಡ್ ಹಾಗೂ ದಿಂಬು ಬಂದಿದೆ.
ಹೊರಗೆ ಐಷಾರಾಮಿ ಜೀವನ ನಡೆಸಿದ್ದ ನಟ ದರ್ಶನ್ ಜೈಲು ನರಕ ದರ್ಶನ ಮಾಡಿಸಿದೆ. ಚಿಕ್ಕ ರೂಮಿನಲ್ಲಿ ಚಾಪೆ ಮೇಲೆ ಮಲಗಲು ಆಗದೆ ದರ್ಶನ್ ಒದ್ದಾಡುತ್ತಿದ್ದಾರೆ. ಮೊದಲೇ ಕೈ ಹಾಗೂ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ಗೆ ಇದೀಗ ಕೂರೋಕು, ಏಳೋಕು ಕಷ್ಟವಾಗ್ತಿದೆ ಎನ್ನಲಾಗ್ತಿದೆ.
DRDO Recruitment: ಈ ಇಲಾಖೆಯಲ್ಲಿದೆ ಬಂಪರ್ ಉದ್ಯೋಗಾವಕಾಶ! ಯಾವುದೇ ಲಿಖಿತ ಪರೀಕ್ಷೆ ಇಲ್ಲ – ಕೈ ತುಂಬಾ ಸಂಬಳ
ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗೆ ವೈದ್ಯರ ಶಿಫಾರಸ್ಸಿನ ಬೆನ್ನಲ್ಲೇ ಮೆಡಿಕಲ್ ಬೆಡ್, ಕಾಟ್, ದಿಂಬು ನೀಡಲಾಗಿದೆಯಂತೆ. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಮೆಡಿಕಲ್ ಬೆಡ್ ಹಾಗೂ ದಿಂಬು ಬಂದಿದೆ. ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆ ವೈದ್ಯರು ತಪಾಸಣೆ ನಡೆಸಿ ಬೆಡ್ ಹಾಗೂ ದಿಂಬಿ ನೀಡಲು ಶಿಫಾರಸ್ಸು ಮಾಡಿದ್ರು.
ಮೆಡಿಕಲ್ ವರದಿ ಬಂದ ಬಳಿಕ ಹಿರಿಯ ಅಧಿಕಾರಿಗಳಿಗೆ ವರದಿ ಕಳಿಸಿದ್ದ ಜೈಲು ಅಧೀಕ್ಷಕಿ ಲತಾ, ಇಂದು ಮೇಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಬೆಡ್ ಹಾಗೂ ದಿಂಬಿನ ವ್ಯವಸ್ಥೆ ಮಾಡಿದ್ರು. ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಬೆಡ್ & ದಿಂಬು ನೀಡುವಂತೆ ವರದಿಯಲ್ಲಿ ಉಲ್ಲೇಖ ಮಾಡಿದ್ದರು. ಇಂದು ಬಳ್ಳಾರಿ ಜೈಲಿಗೆ ಆ್ಯಂಬುಲೆನ್ಸ್ ನಲ್ಲೇ ಬೆಡ್ ಹಾಗೂ ದಿಂಬು ತಂದ ಸಿಬ್ಬಂದಿ, ದರ್ಶನ್ ಇರುವ ಸೆಲ್ಗೆ ಹಾಕಿದ್ದಾರೆ ಎನ್ನಲಾಗ್ತಿದೆ.