ನವದೆಹಲಿ: ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಭಯಭೀತನಾಗಿದ್ದೆ ಎಂದು ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತಮ್ಮ ಅನುಭವವನ್ನು ಬಚ್ಚಿಟ್ಟಿದ್ದಾರೆ. ‘ರಾಜಕೀಯದಲ್ಲಿ ಐದು ದಶಕಗಳು’ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 2012ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಾನು ಗೃಹ ಸಚಿವನಾಗಿದ್ದೆ. ಆ ಸಮಯದಲ್ಲಿ ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದೆ ಎಂದು ತಿಳಿಸಿದ್ದಾರೆ.
ನಾನು ಗೃಹ ಸಚಿವ ಸ್ಥಾನಕ್ಕೇರುವ ಮೊದಲು ಶಿಕ್ಷಣ ತಜ್ಞ ವಿಜಯಧರ್ ಎಂಬುವವರನ್ನು ಭೇಟಿಯಾಗಿದ್ದೆ. ನನಗೆ ಅವರು ಶ್ರೀನಗರದ ಲಾಲ್ ಚೌಕ್ಗೆ ಹೋಗಿ, ಅಲ್ಲಿನ ಜನರನ್ನು ಭೇಟಿ ಮಾಡಿ, ದಾಲ್ ಸರೋವರವನ್ನು ಸುತ್ತಾಡಿ ಬರುವಂತೆ ಸಲಹೆ ನೀಡಿದ್ದರು.
ಕರ್ನಾಟಕಕ್ಕೆ ಗಣೇಶ ಹಬ್ಬದ ಗಿಫ್ಟ್: ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರಕ್ಕೆ ಕೇಂದ್ರ ಅಸ್ತು!
ಆಗ ನನಗೆ ಭಯವಿತ್ತು, ಆದರೆ ಯಾರಿಗೆ ಹೇಳುವುದು? ಈಗ ನಾನಿದನ್ನು ನಿಮಗೆ ನಗಿಸಲು ಹೇಳುತ್ತಿದ್ದೇನೆ. ಆದ್ರೆ ಆ ಸಮಯದಲ್ಲಿ ನನಗೆ ಭಯವಿತ್ತು. ನಾನು ಲಾಲ್ ಚೌಕ್ನಲ್ಲಿ ಶಾಪಿಂಗ್ ಮಾಡಿದೆ. 1978ರಲ್ಲಿ ನಿರ್ಮಾಣವಾದ ಗಡಿಯಾರ ಗೋಪುರಕ್ಕೂ ಭೇಟಿ ನೀಡಿದೆ. 2008 ಮತ್ತು 2010ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಾಗ ಪಾಕಿಸ್ತಾನದ ಧ್ವಜಗಳು ಹಾರಿದ ಸಂದರ್ಭವನ್ನು ನಾನು ನೋಡಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.