ಭಾರತೀಯ ಕ್ರಿಕೆಟ್ಗೆ ಮಾಜಿ RCB ಆಟಗಾರ ಸಿದ್ದಾರ್ಥ್ ಕೌಲ್ ನಿವೃತ್ತಿ ಘೋಷಿಸಿದ್ದಾರೆ.
ಗದಗ: ವನ್ಯಜೀವಿ ಧಾಮ ಕಪ್ಪತ್ತಗುಡ್ಡಕ್ಕೆ ಕಂಟಕ! ಈ ಕುರಿತಾದ ರಿಪೋರ್ಟ್ ಇಲ್ಲಿದೆ!
ಸಿದ್ಧಾರ್ಥ್ ಟೀಂ ಇಂಡಿಯಾ ಪರ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದು, ಅವರು ಐಪಿಎಲ್ನಲ್ಲೂ ಆಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾನು ಬಾಲ್ಯದಲ್ಲಿ ಮತ್ತು ಪಂಜಾಬ್ನ ಮೈದಾನಗಳಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ದೇಶವನ್ನು ಪ್ರತಿನಿಧಿಸುವ ಕನಸು ಕಂಡಿದ್ದೆ. ದೇವರ ದಯೆಯಿಂದ ಆ ಕನಸು 2018 ರಲ್ಲಿ ನನಸಾಯಿತು.
ಟಿ20 ತಂಡದಲ್ಲಿ ನನ್ನ ಕ್ಯಾಪ್ ಸಂಖ್ಯೆ 75 ಮತ್ತು ಏಕದಿನ ತಂಡದಲ್ಲಿ ನನ್ನ ಕ್ಯಾಪ್ ಸಂಖ್ಯೆ 221 ಆಗಿತ್ತು. ಈಗ ನಾನು ಭಾರತದಲ್ಲಿ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವ ಮತ್ತು ನನ್ನ ನಿವೃತ್ತಿಯನ್ನು ಘೋಷಿಸುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.