ಸ್ಯಾಂಡಲ್ ವುಡ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇಬ್ಬರ ಮನೆಯಲ್ಲೂ ಮದುವೆ ಸಂಭ್ರಮ ಜೋರಾಗಿದ್ದು, ಅರಿಶಿನ ಶಾಸ್ತ್ರ ಕಾರ್ಯಕ್ರಮ ಅದ್ಧೂರಿತಯಾಗಿ ನಡೆದಿದೆ.
ತರುಣ್ ಸುಧೀರ್ ವೈಟ್ ವೇಸ್ಕೋಟ್ ನಲ್ಲಿ ಮಿಂಚಿದ್ರೆ, ಸೋನಲ್ ಕೂಡ ವೈಟ್ ಆ್ಯಂಡ್ ಎಲ್ಲೋ ಡಿಸೈನ್ ಡ್ರೆಸ್ನಲ್ಲಿ ಕಂಗೊಳಿಸಿದ್ದಾರೆ. ಇಬ್ಬರು ಒಟ್ಟಿಗೆ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿದ್ದು ಕುಟುಂಬಸ್ಥರು ಜೋಡಿಗೆ ಅರಿಶಿನ ಹಚ್ಚಿ ಸಂಭ್ರಮಿಸಿದ್ದಾರೆ.
ತರುಣ್, ಸೋನಲ್ ಅರಿಸಿನ ಶಾಸ್ತ್ರದಲ್ಲಿ ಕುಟುಂಬಸ್ಥರು, ಸ್ನೇಹಿತರು ಕೂಡ ಭಾಗಿಯಾಗಿದ್ರು. ಯಲಹಂಕದ ಬಳಿ ಇರುವ ಖಾಸಗಿ ರೆಸಾರ್ಟ್ ನಲ್ಲಿ ಅರಿಶಿನ ಶಾಸ್ತ್ರ ನಡೆದಿದ್ದು ನಟರಾದ ನೆನಪಿರಲಿ ಪ್ರೇಮ್, ಶರಣ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
ಸೋನಲ್ ಮತ್ತು ತರುಣ್ ಮದುವೆ ಪ್ಲ್ಯಾನಿಂಗ್ ಸಖತ್ ಆಗಿಯೇ ರೆಡಿ ಮಾಡಿದ್ದಾರೆ. ಇಡೀ ಮದುವೆ ಹಾಲ್ ರೆಡ್ ಥೀಮ್ ಅಲ್ಲಿಯೇ ಇದೆ. ಇದರ ಜೊತೆಗೆ ಇನ್ನೊಂದಿಷ್ಟು ಬೇರೆ ಬೇರೆ ಕಲರ್ ಕೂಡ ಇವೆಯಂತೆ. ಆದರೆ, ಮೂಲತಃ ಇಲ್ಲಿ ರೆಡ್ ಥೀಮ್ ಹೆಚ್ಚು ಕಾಣಿಸುತ್ತದೆ. ಈ ಒಂದು ರೆಡ್ ಥೀಮ್ ಅಲ್ಲಿ ತರುಣ್ ಸುಧೀರ್ ಬ್ಲಾಕ್ ಡ್ರೆಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋನಲ್ ಮಂಥೆರೋ ಗೋಲ್ಡನ್ ಕಲರ್ ಡ್ರೆಸ್ನಲ್ಲೂ ಮಿಂಚಲಿದ್ದಾರಂತೆ.
ಮದುವೆ ಹಾಲ್ ಒಳಗೆ ರೆಡ್ ಥೀಮ್ ಅಲ್ಲಿಯೇ ಡೆಕೋರೇಷನ್ ಇರುತ್ತದೆ. ಆದರೆ, ಔಟ್ ಡೋರ್ನಲ್ಲಿ ಸಿನಿಮಾ ಥೀಮ್ ಇದೆ. ಅದರಲ್ಲೂ ರೆಟ್ರೋ ಥೀಮ್ ಅಲ್ಲಿಯೇ ಇಲ್ಲಿ ಪ್ಲ್ಯಾನ್ ಮಾಡಲಾಗಿದೆ. ಅಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಹೇಗೆಲ್ಲ ಇರ್ತಾ ಇತ್ತೋ ಅದೇ ರೀತಿನೇ ಇಲ್ಲಿ ಥೀಮ್ ಮಾಡಲಾಗಿದೆಯಂತೆ.
ತರುಣ್ ಹಾಗೂ ಸೋನಲ್ ಮದುವೆ ಎರಡು ದಿನ ಪ್ಲ್ಯಾನ್ ಆಗಿದೆ. ಆಗಸ್ಟ್-10 ರಂದು ಸಂಜೆ 6 ಗಂಟೆ ಹೊತ್ತಿಗೆ ರಿಸೆಪ್ಷನ್ ಇದೆ. ಮರು ದಿನ ಬೆಳ್ಳಗೇನೆ 10 ಗಂಟೆಗೆ ಮದುವೆ ನೆರವೇರಲಿದೆ. ತರುಣ್ ಸುಧೀರ್ ಕುಟುಂಬಸ್ಥರ ಸಂಪ್ರದಾಯದಂತೇನೆ ಇಲ್ಲಿ ಎಲ್ಲವೂ ಪ್ಲ್ಯಾನ್ ಆಗಿದೆ.
ಸೋನಲ್ ಹಾಗೂ ತರುಣ್ ಸುಧೀರ್ ಮದುವೆಗೆ ಎರಡು ರೀತಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಸೌತ್ ಹಾಗೂ ನಾರ್ತ್ ಎರಡು ಕಡೆಯ ವಿವಿಧ ಭಕ್ಷ್ಯಗಳ ವ್ಯವಸ್ಥೆಯನ್ನ ಇಲ್ಲಿ ಪ್ಲ್ಯಾನ್ ಮಾಡಲಾಗಿದೆಯಂತೆ. ತರುಣ್-ಸೋನಲ್ ಮದುವೆಗೆ ಹಲವು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ.
ಸ್ಯಾಂಡಲ್ವುಡ್ನ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಒಳ್ಳೆಯ ನಟ ಕೂಡ. ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಣೇಶನ ಮದುವೆ ಸಿನಿಮಾದಲ್ಲಿ ಬಾಲಕಲಾವಿದರಾಗಿ ಮಿಂಚಿದ್ದರು. ಬಳಿಕ ಎಕ್ಸ್ಕ್ಯೂಸ್ ಮೀ, ಚಪ್ಪಾಳೆ, ಕ್ರೈಮ್ ಸ್ಟೋರಿ, ವಿಷ್ಣುಸೇನಾ, ಜೊತೆಜೊತೆಯಲಿ, ವಿದ್ಯಾರ್ಥಿ, ನವಗ್ರಹ, ಹೊಂಗನಸು, ಚೆಲುವೆಯೇ ನಿನ್ನೇ ನೋಡಲು, ಹಗ್ಗದ ಕೊನೆ, ಗಜಕೇಸರಿ, ವ್ರಿತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಾಬರ್ಟ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಅನ್ನುವ ಸುದ್ದಿ ಇದೆ. ಇದೀಗ ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಮದುವೆಗೆ ಆಗ್ತಿದ್ದಾರೆ. ದರ್ಶನ್ ಕೂಡ ಆಗಾಗ ತರುಣ್ಗೆ ಮದುವೆ ಮಾಡಿಸಬೇಕು ಎನ್ನುತ್ತಿದ್ದರಂತೆ. ಹಾಗಾಗಿ ಶೂಟಿಂಗ್ ಸೆಟ್ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿದೆ.