ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಇತ್ತೀಚೆಗೆ ಕೊಂಚ ಬಿಡುವು ಮಾಡಿಕೊಂಡು ರ್ಯಾಂಪ್ ವಾಕ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಜೊತೆಯಾಗಿ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಫಾಲ್ಗುಗಿ ಶೇನ್ ಪಿಕಾಕ್ ಕಲೆಕ್ಷನ್ ಅವರ ಸುಂದರವಾದ ವೆಡ್ಡಿಂಗ್ ವೇರ್ ಧರಿಸಿ ಶೋ ಸ್ಟಾಪರ್ ಆಗಿ ರ್ಯಾಂಪ್ ವಾಕ್ ಮಾಡಿದ್ದರು.
ನಟ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ರ್ಯಾಂಪ್ ವಾಕ್ ಮಾಡಿದ್ದ ರಶ್ಮಿಕಾ ಈ ವೇಳೆ ತೆಗೆದ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುತ್ತಿನ ಬಟ್ಟೆಯಲ್ಲಿ ನಟಿ ಮತ್ತೇರಿಸಿದ್ದಾರೆ.
ಪರ್ಪಲ್ ಬ್ಯಾಗ್ರೌಂಡ್ನಲ್ಲಿ ಇಡೀ ಒಂದು ಫೋಟೋ ಶೂಟ್ ಮಾಡಲಾಗಿದೆ. ರಶ್ಮಿಕಾ ಧರಿಸಿರುವ ಗ್ರ್ಯಾಂಡ್ ಲೆಹೆಂಗಾದ ತುಂಬೆಲ್ಲಾ ಮುತ್ತುಗಳು ತುಂಬಿಕೊಂಡಿವೆ. ಜೊತೆಗೆ ಊದವಾಗಿ ಕೂದಲ್ಲನ್ನು ಬಿಟ್ಟುಕೊಂಡಿರುವ ನಟಿ ಡ್ರಸ್ ಗೆ ಮ್ಯಾಚ್ ಆಗುವಂತೆ ಕಿವಿಯೋಲೆ ಹಾಗೂ ಬೈತಲೆ ಬೊಟ್ಟನ್ನು ಕೂಡ ಧರಿಸಿದ್ದಾರೆ.
ರಶ್ಮಿಕಾ ಮಂದಣ್ಣ ತಮ್ಮ ಈ ಒಂದು ಫೋಟೋ ಶೂಟ್ ಜೊತೆಗೆ ಒಂದಷ್ಟು ಬರೆದುಕೊಂಡಿದ್ದಾರೆ. ಆ ಒಂದು ಮಾತು ತುಂಬಾನೆ ಚೆನ್ನಾಗಿವೆ. ವಿಶೇಷವಾಗಿ ರಶ್ಮಿಕಾ ಮಂದಣ್ಣ ಇಲ್ಲಿ ತಮ್ಮ ಬಗ್ಗೆ ಬರೆದುಕೊಂಡಿದ್ದಾರೆ. ನಮ್ಮನ್ನ ನಾವು ಅರ್ಥ ಮಾಡಿಕೊಂಡ್ರೆ ಆಗೋ ಖುಷಿನೇ ಬೇರೆ ಇದೆ ಅಂತಲೇ ಹೇಳಿಕೊಂಡಿದ್ದಾರೆ.
ನಿಮ್ಮನ್ನ ನೀವು ಕಂಡುಕೊಂಡಾಗ, ನಿಮ್ಮನ್ನ ನೀವು ಪ್ರೀತಿಸಿದಾಗ, ನಿಮ್ಮ ದೇಹ ನಿಮಗೆ ಕಂಫರ್ಟೇಬಲ್ ಅನಿಸಿದಾಗ, ನಿಜಕ್ಕೂ ಎಲ್ಲವೂ ಚೇಂಜ್ ಆಗುತ್ತದೆ. ಇದು ಸತ್ಯ ಅನ್ನೋ ಅರ್ಥದಲ್ಲಿಯೇ ರಶ್ಮಿಕಾ ಮಂದಣ್ಣ ಈಗ ಹಂಚಿಕೊಂಡ ಫೋಟೋಗಳ ಜೊತೆಗೆ ಬರೆದುಕೊಂಡಿದ್ದಾರೆ.
ನಮ್ಮಲ್ಲಿ ನಾವು ಬದಲಾವಣೆ ಕಂಡುಕೊಳ್ಳಬೇಕು ಅಂದ್ರೆ, ಅದಕ್ಕೆ ಟೈಮ್ ಬೇಕಾಗುತ್ತದೆ. ಜೊತೆಗೆ ನಮ್ಮ ಸುತ್ತ-ಮುತ್ತಲಿನ ಜನರನ್ನ ನೀವು ಹೇಗೆ ತೆಗೆದುಕೊಳ್ತೀರಿ ಅನ್ನೊದು ಕೌಂಟ್ ಆಗಿರುತ್ತದೆ. ಇದರಿಂದ ನಿಮ್ಮ ಬೆಳವಣಿಗೆ ಕೂಡ ಚೆನ್ನಾಗಿಯೇ ಆಗುತ್ತದೆ. ಹಾಗೆ ಜೀವನದಲ್ಲಿ ನೀವು ಕೆಲವನ್ನ ಕಲಿಯಬೇಕಾಗುತ್ತದೆ. ಆಗಲೇ ಬದಲಾವಣೆಯನ್ನ ಕಾಣಬಹುದು ಅಂತಲೂ ರಶ್ಮಿಕಾ ಹೇಳಿಕೊಂಡಿದ್ದಾರೆ.
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ ಐತಿಹಾಸಿಕ ಚಿತ್ರ ಚವ್ವದಲ್ಲಿ ನಟಿಸಲಿದ್ದು, ಅದಕ್ಕೂ ಮುನ್ನ ಇಬ್ಬರು ಜೊತೆಯಾಗಿ ಫ್ಯಾಷನ್ ಶೋದಲ್ಲಿ ಕೈಕೈ ಹಿಡಿದು ರ್ಯಾಂಪ್ ವಾಕ್ ಮಾಡೋ ಮೂಲಕ ಮೋಡಿ ಮಾಡಿದ್ದರು. ಕಾರ್ಯಕ್ರಮದ ಬಳಿಕ ಇಬ್ಬರೂ ಜೊತೆಯಾಗಿ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ.