ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಇದೇ ಆ.10 ಹಾಗೂ 11ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಗೆ ಇನ್ನೂ ಎರಡು ದಿನ ಮಾತ್ರವೇ ಭಾಕಿ ಇದೆ.
ಒಂದು ಕಡೆ ಕುಟುಂಬಸ್ಥರು ಮದುವೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದರೆ ಮತ್ತೊಂದೆಡೆ ತರುಣ್ ಸುಧೀರ್ ಆಮಂತ್ರಣ ಪತ್ರಿಕೆ ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ನಿರ್ದೇಶಕ ತರುಣ್ ಸುಧೀರ್ ಅವರು ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ತರುಣ್ ಸುಧೀರ್ ಅವರು ಮದುವೆಯ ಆಮಂತ್ರಣ ನೀಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ರನ್ನು ಭೇಟಿಯಾದ ತರುಣ್ ಸುಧೀರ್ ಮದುವೆಗೆ ಆಮಂತ್ರಣ ನೀಡಿದ್ದಾರೆ. ಧರ್ಮಸ್ಥಳ ದೇಗುಲಕ್ಕೆ ಯಶ್ ಭೇಟಿ ನೀಡಿದ್ದರು. ಬುಧವಾರ ಯಶ್ನ ಭೇಟಿಯಾದ ತರುಣ್ ಸುಧೀರ್ ಮದುವೆಗೆ ತಪ್ಪದೇ ಬನ್ನಿ ಎಂದು ಆಮಂತ್ರಿಸಿದ್ದಾರೆ.
ಇತ್ತೀಚೆಗೆ ತರುಣ್ ಸುಧೀರ್ ನಟ ದರ್ಶನ್ ರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾಗಿದ್ದರು. ಆದರೆ ಈ ವೇಳೆ ದರ್ಶನ್ ಗೆ ಮದುವೆ ಪತ್ರಿಕೆ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ತರುಣ್ ಸುಧೀರ್ ಅವರು ದರ್ಶನ್ ಸಹೋದರ ದಿನಕರ್ ತೂಗುದೀಪ ಅವರನ್ನು ಭೇಟಿಯಾಗಿ ಮದುವೆಯಾಗಿ ಆಮಂತ್ರಣ ನೀಡಿದ್ದಾರೆ.
ಬುಧವಾರ ತರುಣ್ ಸುದೀಪ್ ಅವರು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನೂ ಭೇಟಿಯಾಗಿ ಮದುವೆ ಆಮಂತ್ರಣ ನೀಡಿದ್ದಾರೆ.
ಸ್ಯಾಂಡಲ್ವುಡ್ ಮತ್ತು ರಾಜಕೀಯ ಗಣ್ಯರಿಗೆ ನಿರ್ದೇಶಕ ತರುಣದ ಸುಧೀರ್ ಮದುವೆ ಆಮಂತ್ರಣ ನೀಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ನಟಿ ರಚಿತಾ ರಾಮ್, ನಾದಬ್ರಹ್ಮ ಹಂಸಲೇಖ, ನಟ ಶ್ರೀಮುರಳಿ, ನೆನಪಿರಲಿ ಪ್ರೇಮ್ ದಂಪತಿಗೆ, ಆರಾಧನಾ ರಾಮ್ ಮತ್ತು ಮಾಲಾಶ್ರೀ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ದಂಪತಿಗೆ, ರಿಯಲ್ ಸ್ಟಾರ್ ಉಪೇಂದ್ರಗೆ, ಕಿಚ್ಚ ಸುದೀಪ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ತನ್ನ ಆತ್ಮೀಯರಿಗೆ, ಪರಿಚಿತರಿಗೆ, ಕರ್ನಾಟಕದ ಪ್ರಮುಖಗರಿಗೆ ಮದುವೆ ಆಮಂತ್ರಣ ನೀಡಿದ್ದಾರೆ.
ಇನ್ನೊಂದೆಡೆ ಸೋನಾಲ್ ಕೂಡ ಮದುವೆ ಬಿಝಿಯಲ್ಲಿದ್ದಾರೆ. ತನ್ನ ಆತ್ಮೀಯರಿಗೆ ಆಮಂತ್ರಣ ತಲುಪಿಸಿದ್ದಾರೆ. ಇದೇ ಸಮಯದಲ್ಲಿ ಕೆಲವು ದಿನದ ಹಿಂದೆ ಬ್ಯಾಚುಲರ್ ಪಾರ್ಟಿ ಕೂಡ ನಡೆಸಿದ್ದರು. ಇವರ ಅಮ್ಮ ಮತ್ತು ತಂಗಿ ಸರ್ಪ್ರೈಸ್ ಬರ್ತ್ಡೇ ಪಾರ್ಟಿ ಹಮ್ಮಿಕೊಂಡಿದ್ದರು. ಅಲ್ಲಿ ತರುಣ್ ಫೋಟೋಗೂ ಸೋನಾಲ್ ಕೇಕ್ ತಿನ್ನಿಸಿದ್ದರು.