ವಿಜಯನಗರ:– ಭಾರೀ ಮಳೆ ಹಿನ್ನೆಲೆ ತುಂಗಭದ್ರಾ ಜಲಾಶಯ ಹಿನ್ನೀರು ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ವಿಜಯನಗರ ಜಿಲ್ಲೆಯ ಮಕರಬ್ಬಿ-ಬ್ಯಾಲಹುಣಸೆ ಗ್ರಾಮದ ಸಂಪರ್ಕ ರಸ್ತೆ ಜಲಾವೃತವಾಗಿದೆ. ಸಂಪರ್ಕ ಕಡಿತದಿಂದಾಗಿ ಮಕರಬ್ಬಿ ಗ್ರಾಮಸ್ಥರು ತೀವ್ರ ಪರದಾಟ ಅನುಭವಿಸ್ತಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ವ್ಯಾಪ್ತಿಗೆ ಒಳಪಡುವ ಮಕರಬ್ಬಿ ಗ್ರಾಮ ಇದಾಗಿದೆ.
ಮುಡಾ ಹಗರಣ: ರಾಜ್ಯಪಾಲರ ಮುಂದಿನ ನಡೆಯ ಬಗ್ಗೆ ಸರ್ಕಾರದ ಹದ್ದಿನ ಕಣ್ಣು..!
ನೀರು ಜಲಾವೃತವಾಗಿರೋದ್ರಿಂದ ಮಕರಬ್ಬಿ ಗ್ರಾಮದಿಂದ ಬ್ಯಾಲಹುಣಸೆ ಶಾಲೆಗೆ ತೆರಳಬೇಕಿದ್ದ ಶಾಲಾ ಮಕ್ಕಳು ಪರದಾಟ ನಡೆಸಿದ್ದಾರೆ. ರಸ್ತೆ ಸಂಪರ್ಕ ಕಡಿತವಾದ್ರಿಂದ 2 ದಿನದಿಂದ ಶಾಲೆಗೆ ತೆರಳದೇ ಮಕ್ಕಳು ಗೈರಾದರು. ಮಕ್ಕಳ ಪರದಾಟ ಒಂದೆಡೆಯಾದ್ರೆ, ವಯೋವೃದ್ಧರು, ಮಹಿಳೆಯರು ಬೇರೆ ಗ್ರಾಮಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ.
ಇನ್ನೂ ರಸ್ತೆ ಜಲಾೃತ ಆಗಿರುವ ಹಿನ್ನೆಲೆ ಬೈಕ್ ಸವಾರರು ಹುಚ್ಚಾಟ ಮೆರೆದಿದ್ದಾರೆ. ಜಲಾವೃತವಾದ ರಸ್ತೆ ಮಧ್ಯೆ ಸಾಲು ಸಾಲು ಬೈಕ್ ನಿಲ್ಲಿಸಿ ಬೈಕ್ ಸವಾರರು ತೊಳಿಯುತ್ತಿದ್ದಾರೆ. ಮೊಣಕಾಲುವರೆಗೆ ಜಲಾವೃತವಾದ ರಸ್ತೆಯಲ್ಲಿಯೇ ಬೈಕ್ ನಿಲ್ಲಿಸಿ ಬೈಕ್ ಸವಾರರು ಕ್ಲೀನ್ ಮಾಡಿಕೊಳ್ತಿದ್ದಾರೆ.
ಜಲಾವೃತ ರಸ್ತೆಯಲ್ಲಿ ಸಂಚಾರ ನಡೆಸಿ ಗ್ರಾಮಸ್ಥರು ಹುಚ್ಚಾಟ ಮೆರೆದಿದ್ದಾರೆ. ಸ್ವಲ್ಪ ಯಾಮಾರಿದ್ರೂ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಕೊಂಡು ಹೋಗುವ ಭೀತಿ ಇದೆ. ಆದರೆ ಇಲ್ಲಿ ಬೈಕ್ ಸವಾರರು ಅದರಲ್ಲೆ ಸಂಚರಿಸ್ತಿದ್ದಾರೆ.
ಟಿಬಿ ಡ್ಯಾಂ ಭರ್ತಿಯಾಗಿದ್ರಿಂದ ಹಿನ್ನೀರು ಪ್ರದೇಶದ ಗ್ರಾಮಗಳಲ್ಲಿ ಇದೀಗ ಪ್ರವಾಹ ಭೀತಿ ಎದುರಾಗಿದೆ.