ಬೆಂಗಳೂರು:- ಮುಡಾ ಹಗರಣದಲ್ಲಿ ಸರ್ಕಾರ ಹಾಗು ರಾಜ್ಯಪಾಲರ ನಡುವೆ ಕಾನೂನು ಸಂಘರ್ಷ ಶುರುವಾಗಿದೆ.ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡ್ತಾರಾ ಅಥವಾ ಇಲ್ವಾ ಎಂಬ ಚರ್ಚೆ ಶುರುವಾಗಿದೆ.ಇತ್ತ ಮಂತ್ರಿ ಪರಿಷತ್ ತೆಗದುಕೊಂಡಿರುವ ನಿರ್ಧಾರ ಬಗ್ಗೆ ರಿಯಾಕ್ಟ್ ಮಾಡಿರುವ ಸಿಎಂ,ನಾನೇನು ತಪ್ಪೇ ಮಾಡಿಲ್ಲ ಎಂದು ಸರ್ಮಥನೆ ಮಾಡಿಕೊಂಡಿದ್ದಾರೆ.ಇದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
ಡಿಕೆಶಿ VS ವಿಜಯೇಂದ್ರ ಮಧ್ಯೆ ಪಾದಯಾತ್ರೆ ಟಾಕ್ ವಾರ್: ಹಗರಣಗಳ ಪಿತಾಮಹ ಯಾರೆಂದು ವೈಯಕ್ತಿಕ ಪೈಟ್..!
ಯೆಸ್, ಮುಡಾ ಹಗರಣದಲ್ಲಿ ಪ್ರತಿಪಕ್ಷ ಬಿಜೆಪಿ,ಜೆಡಿಎಸ್ ಪಾದಾಯಾತ್ರೆ ಮಾಡುತ್ತಿದ್ರೆ,ಇತ್ತ ರಾಜ್ಯಪಾಲರಾದ ಗೆಹ್ಲೋಟ್ ಮಧ್ಯಪ್ರವೇಶ ಮಾಡಿದ್ದಾರೆ.ಈಗಾಗಲೇ ಈ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು,ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಸತ್ಯಾಂಶ ಇದೆ ಎಂದು ನೋಟಿಸ್ನಲ್ಲಿ ರಾಜ್ಯಪಾಲರು ಹೇಳಿದ್ದಾರೆ.ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ನೋಟಿಸ್ ವಾಪಸ್ ಪಡೆಯುವ ಬಗ್ಗೆ ರಾಜ್ಯಪಾಲರ ನಡೆ ವಿರುದ್ಧ ನಿರ್ಣಯ ಅಂಗೀಕಾರಿಸಲಾಗಿತ್ತು. ಹೀಗಾಗಿ, ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಇದೀಗ ಕಾನೂನು ಸಂರ್ಘಷ ಶುರುವಾಗಿದ್ದು,ರಾಜ್ಯಪಾಲರ ನಡೆ ಕೂತೂಹಲ ಕೆರಳಸಿದೆ.ಒಂದು ವೇಳೆ ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ಪರ್ಮಿಷನ್ ನೀಡಿದ್ದೇ ಆದಲ್ಲಿ,ಸುಪ್ರೀಕೋರ್ಟ್ ಮೊರೆ ಹೋಗಲು ಸರ್ಕಾರ ನಿರ್ಧಾರಿಸಿದೆ.
ಇನ್ನು ಸಿಎಂ ಸಿದ್ದರಾಮಯ್ಯಗೆ ಬೆಂಬಲಕ್ಕೆ ನಿಂತಿರುವ ಕೈ ನಾಯಕರು ,ಕೇಂದ್ರ ಸರ್ಕಾರ ನಮ್ಮ ಸರ್ಕಾರವನ್ನ ಟಾರ್ಗೆಟ್ ಮಾಡ್ತಿದೆ.ಇದ್ರ ಭಾಗವಾಗಿಯೇ ಸಿಎಂಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಬಿಜೆಪಿ ನಾಯಕರು,ನಮ್ಮ ಹೋರಾಟ ವ್ಯಕ್ತಿಯ ವಿರುದ್ಧ ಅಲ್ಲ.ಭ್ರಷ್ಟ ಸರ್ಕಾರದ ವಿರುದ್ಧ ಎಂದು ವಾಕ್ ಪ್ರಹಾರ ನಡೆಸಿದ್ದಾರೆ.
ಇನ್ನು ಮುಡಾ ಹಗರಣದಲ್ಲಿ ಸಿಎಂ ಪಾತ್ರದ ಕುರಿತು ರಾಜ್ಯಪಾಲರಿಗೆ ಖಾಸಗಿ ದೂರು ಸಲ್ಲಿಸಿದ್ದ ದೂರುದಾರ ಟಿ ಜೆ.ಅಬ್ರಾಹಂ,ಸಿಎಂಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.ಇಲ್ದೇ ಇರುವ ಭೂಮಿಗೆ,ಅಧಿಕಾರ ದುರುಪಯೋಗಪಡಿಸಿಕೊಂಡು ಸಿದ್ದರಾಮಯ್ಯನವರು 14 ಸೈಟ್ ಪಡೆದುಕೊಂಡಿದ್ದಾರೆ.ಇಲ್ದೇ ಇರುವ ಜಮೀನುಗೆ ಪರಿಹಾರ ಸಿಗುತ್ತಾ ಎಂದು ಟಿ.ಜೆ.ಅಬ್ರಾಹಂ ಪ್ರಶ್ನೆ ಮಾಡಿದ್ದಾರೆ.
ಒಟ್ನಲ್ಲಿ,ಮೂಡಾ ಹಗರಣದಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ.ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ಕೊಡುವ ಸಾಧ್ಯತೆ ಇದ್ದು,ಇದಕ್ಕೆ ಪ್ರತಿಯಾಗಿ ಸುಪ್ರೀಂ ಮೆಟ್ಟಿಲೇರೋಕೆ ಸರ್ಕಾರ ಕೂಡ ನಿರ್ಧರಿಸಿದೆ.ಇದ್ರಿಂದ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಶೀತಲ ಸಮರ ನಡೆಯೋದು ಖಚಿತವಾಗಿದೆ.