ಜಗತ್ತಿನಲ್ಲಿ ಎಲ್ಲಾ ಸಂಬಂಧದ ಮಹತ್ವವನ್ನು ತಿಳಿಸಲೂ ಒಂದೊಂದು ದಿನವಿದೆ. ಹಾಗೆಯೇ ಸ್ನೇಹ ಎಂಬ ಒಳ್ಳೆಯ ಬಾಂಧವ್ಯದ ಮಹತ್ವವನ್ನು ಸಾರಲು ಪ್ರತಿ ವರ್ಷ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಣೆ ಮಾಡಲಾಗುತ್ತದೆ. ಸ್ನೇಹವು ಮಾನವ ಸಂಬಂಧಗಳ ನಿಜವಾದ ರೂಪವಾಗಿದೆ. ಇದು ಜಾತಿ, ಧರ್ಮ, ಬಣ್ಣ, ವಯಸ್ಸು, ಧರ್ಮ ಮತ್ತು ಜನಾಂಗೀಯತೆಯ ಎಲ್ಲಾ ರೀತಿಯ ಸಾಮಾಜಿಕ ಅಡೆತಡೆಗಳನ್ನು ಹೊರತುಪಡಿಸಿ ಪ್ರೀತಿಯ ಕಲ್ಪನೆಯನ್ನು ಆಧರಿಸಿದೆ.
ಜಗತ್ತಿನಲ್ಲಿ ನಿಸ್ವಾರ್ಥವಾದ ಯಾವುದಾದರೂ ಇದ್ದರೆ ಅದು ಸ್ನೇಹ. ಈ ಬಾರಿ ಜುಲೈ 30 ರಂದು ಫ್ರೆಂಡ್ಶಿಪ್ ಡೇ ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಸ್ನೇಹದ ಆಚರಣೆಯ ದಿನಾಂಕ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಮಲೇಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಭಾರತ, ಯುನೈಟೆಡ್ ಸ್ಟೇಟ್ಸ್ ಮತ್ತು ಬಾಂಗ್ಲಾದೇಶದಂತಹ ರಾಷ್ಟ್ರಗಳಲ್ಲಿ ಆಗಸ್ಟ್ನಲ್ಲಿ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಆದರೆ ಇತರ ಹಲವು ದೇಶಗಳು ಜುಲೈ 30ರಂದು ಸ್ನೇಹಿತರ ದಿನವನ್ನು ಆಚರಿಸುತ್ತವೆ.
ಭಾರತದಲ್ಲಿ ಸ್ನೇಹಿತರ ದಿನ ಯಾವಾಗ?
ಭಾರತ, ಅಮೇರಿಕಾ, ಬಾಂಗ್ಲಾದೇಶ, ಮಲೇಷ್ಯಾ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 4 ರಂದು ಪ್ರೆಂಡ್ಶಿಪ್ ಡೇ ಆಚರಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಸ್ನೇಹಿತರ ದಿನದ ಇತಿಹಾಸ
ಮೊದಲ ಬಾರಿಗೆ ಸ್ನೇಹಿತರ ದಿನವನ್ನು 1958ರಲ್ಲಿ ಆಚರಿಸಲಾಯಿತು. ಇದನ್ನು ಮೊದಲು ಪರಾಗ್ವೆಯಲ್ಲಿ 1958ರಲ್ಲಿ ಅಂತಾರಾಷ್ಟ್ರೀಯ ಸ್ನೇಹ ದಿನ ಎಂದು ಪ್ರಸ್ತಾಪಿಸಲಾಯಿತು. ವಿಶ್ವಸಂಸ್ಥೆಯು ಅಂತಿಮವಾಗಿ ಜುಲೈ 30ನ್ನು ಅಧಿಕೃತ ಅಂತರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು. ಆದರೆ, ಭಾರತದಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನುಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಸ್ನೇಹಿತರ ದಿನದ ಮಹತ್ವ
ಸ್ನೇಹವು ಜನರು, ದೇಶಗಳು, ಸಂಸ್ಕೃತಿಗಳು ಮತ್ತು ವ್ಯಕ್ತಿಗಳ ನಡುವೆ ಶಾಂತಿ ಪ್ರಯತ್ನಗಳನ್ನು ಪ್ರೇರೇಪಿಸುತ್ತದೆ ಮತ್ತು ಸಮುದಾಯಗಳನ್ನು ಜೋಡಿಸಬಹುದು ಎಂದು UN ಪ್ರಸ್ತಾಪಿಸಿದೆ. ಹಳದಿ ಗುಲಾಬಿಯನ್ನು ಹೆಚ್ಚಾಗಿ ಅಂತಾರಾಷ್ಟ್ರೀಯ ಸ್ನೇಹ ದಿನಾಚರಣೆಯೊಂದಿಗೆ ಸಂಯೋಜಿಸಲಾಗುತ್ತದೆ.
ಇದನ್ನು ಸ್ನೇಹದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಈ ದಿನದಂದು ಸ್ನೇಹಿತರ ನಡುವೆ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಜನಾಂಗ, ಬಣ್ಣ ಅಥವಾ ಧರ್ಮವನ್ನು ಲೆಕ್ಕಿಸದೆ ಸ್ನೇಹವನ್ನು ಆಚರಿಸುವುದು ಈ ದಿನದ ಅತ್ಯಂತ ಮುಖ್ಯವಾಗಿದೆ. ಸ್ನೇಹ ದಿನವು ವೈಯಕ್ತಿಕ ಜನರು ಮತ್ತು ದೇಶಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಅವಕಾಶವನ್ನು ಒದಗಿಸುತ್ತದೆ.
ಸ್ನೇಹಿತರ ದಿನದ ಚಟುವಟಿಕೆಗಳು
ಜನರು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ತಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಾರೆ. ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸಾಮಾಜಿಕ ಕೂಟಗಳು ಅಥವಾ ಪಾರ್ಟಿಗಳನ್ನು ಆಯೋಜಿಸುತ್ತಾರೆ. ಅಂತಾರಾಷ್ಟ್ರೀಯ ಸ್ನೇಹ ದಿನವು ಇತರರ ಕಡೆಗೆ ದಯೆ ಮತ್ತು ಸದ್ಭಾವನೆಯ ಕಾರ್ಯಗಳನ್ನು ಪ್ರೋತ್ಸಾಹಿಸುತ್ತದೆ.
ಅಂತಾರಾಷ್ಟ್ರೀಯ ಸ್ನೇಹಿತರ ದಿನದ ಉದ್ದೇಶ
ಅಂತರಾಷ್ಟ್ರೀಯ ಸ್ನೇಹಿತರ ದಿನದ ಆಚರಣೆಯ ಮುಖ್ಯ ಉದ್ದೇಶವೇ ಸಾಮರಸ್ಯವಾಗಿದೆ. ಜನರ ನಡುವೆ ಸ್ನೇಹವಿದ್ದರೆ ಸಮುದಾಯಗಳ ನಡುವೆ ಬಾಂಧವ್ಯ ವೃದ್ಧಿಯಾಗುತ್ತದೆ. ಜೊತೆಗೆ ರಾಜ್ಯಗಳ ನಡುವೆ, ವಿಶ್ವದ ಎಲ್ಲಾ ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಗೆ ಕಾರಣವಾಗುತ್ತದೆ. ಇದು ವಿಶ್ವ ಶಾಂತಿಗೆ ಸ್ಫೂರ್ತಿಯಾಗುತ್ತದೆ ಎನ್ನುವ ಉದ್ದೇಶದಿಂದ ಪ್ರತಿ ವರ್ಷ ಅಂತರಾಷ್ಟ್ರೀಯ ಸ್ನೆಹ ದಿನವನ್ನು ಆಚರಣೆ ಮಾಡಲಾಗುತ್ತದೆ.