ನೀವು ಯಾವುದೇ ಆಹಾರ ಸೇವಿಸುವಾಗ ನಿಮಗೆ ಪದೇ ಪದೇ ಕೂದಲು ಬಾಯಗೆ ಸಿಕ್ಕಿದ್ದರೆ ಅಥವಾ ಕೂದಲು ಆಹಾರದಲ್ಲಿ ಕಾಣಿಸಿಕೊಂಡರೆ ಅಂತಹ ಆಹಾರವನ್ನು ನೀವು ಸೇವಿಸಲು ಹೋಗದಿರಿ. ಆಹಾರದಲ್ಲಿ ಪದೇ ಕೂದಲು ಕಾಣಿಸಿಕೊಳ್ಳುವುದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ಮನೆಯಲ್ಲಿ ಅಥವಾ ಜೀವನದಲ್ಲಿ ಅಶುಭ ರಾಹುವಿನ ಪ್ರಭಾವವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ
Bengaluru: ಇನ್ನುಂದೆ ಬೆಂಗಳೂರಿನ ಎಲ್ಲಾ ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್ʼಗಳಿಗೆ ಹೊಸ ರೂಲ್ಸ್..!
ನಿಮ್ಮ ಜಾತಕದಲ್ಲಿ ರಹು ಕೆಟ್ಟ ಸ್ಥಾನದಲ್ಲಿದ್ದರೆ ಅಥವಾ ನಿಮಗೆ ರಾಹು ದೋಷವಿದ್ದರೆ ಪದೇ ಪದೇ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತೀರಿ. ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತೀರಿ. ಅನಗತ್ಯ ಖರ್ಚುಗಳು ಹೆಚ್ಚಾಗತೊಡಗುತ್ತದೆ. ಅನಾರೋಗ್ಯ ಅಥವಾ ಇತರ ಕಾರಣಗಳಿಂದಾಗಿ ಹಣವನ್ನು ಕೈಯಲ್ಲಿ ಉಳಿಯಲು ರಾಹು ಎಂದಿಗೂ ಅನುಮತಿಸುವುದಿಲ್ಲ.
ಆಹಾರದಲ್ಲಿ ಪದೇ ಪದೇ ಕೂದಲು ಸಿಗುವುದು ಕೇವಲ ರಾಹು ದೋಷಕ್ಕೆ ಮಾತ್ರ ಕಾರಣವಲ್ಲ. ಬದಲಾಗಿ ಇದರಿಂದ ಪಿತೃ ದೋಷ ಕೂಡ ಉಂಟಾಗುತ್ತದೆ. ನೀವು ತಿನ್ನಲು ಕುಳಿತಾಗ ಅಥವಾ ಕೈಯಲ್ಲಿ ಆಹಾರವನ್ನು ತೆಗೆದುಕೊಂಡಾಗ ಕೂದಲು ಕಾಣಿಸಿದರೆ ಅದು ಪಿತೃ ದೋಷದ ಸೂಚನೆಯಾಗಿದೆ. ಯಾವ ಮನೆಯಲ್ಲಿ ಪಿತೃ ದೋಷವಿರುತ್ತದೆಯೋ ಅಂತಹ ಮನೆಯಲ್ಲಿ ಆಹಾರವನ್ನು ಸೇವಸುವಾಗ ಪದೇ ಪದೇ ಅಡಚಣೆಗಳು ಉಂಟಾಗುತ್ತದೆ.
ನಿಮಗೂ ಹೀಗಾದರೆ, ಅಂದರೆ ಊಟ ಮಾಡುವಾಗ ಕೂದಲು ಬಂದರೆ ತಕ್ಷಣ ರಾಹು ಮತ್ತು ಪಿತೃದೋಷಕ್ಕೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳಿ. ಅಲ್ಲದೆ, ಊಟ ಮಾಡುವಾಗ ನಿಮ್ಮ ಕೂದಲನ್ನು ಕಟ್ಟಿಕೊಳ್ಳಿ ಮತ್ತು ಅಡುಗೆ ಮಾಡುವಾಗ ಶುಚಿತ್ವವನ್ನು ನೋಡಿಕೊಳ್ಳಿ. ಅಡುಗೆ ಮನೆಯಲ್ಲಿ ತಲೆ ಕೂದಲನ್ನು ಬಿಟ್ಟುಕೊಂಡು ಹೋಗಬೇಡಿ.
ಇದಲ್ಲದೇ ಊಟ ಬಡಿಸುವಾಗ ಪದೇ ಪದೇ ಕೈಯಿಂದ ಬೀಳುವುದು, ಆಹಾರ ಸೇವಿಸುವಾಗ ಉಂಟಾಗುವ ಯಾವುದೇ ರೀತಿಯ ಅಡಚಣೆ, ಆಹಾರ ಸೇವಿಸುವಾಗ ಯಾವುದೇ ಅಶುಭ ಸುದ್ದಿ ಬಂದರೆ ಅದು ಕೂಡ ಶುಭವಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.