ಬೆಂಗಳೂರು: ಮಕ್ಕಳ ವಸ್ತುಗಳನ್ನೂ ಈಗ ದಂಧೆಗೆ ಬಳಸಿಕೊಳ್ಳಲಾಗ್ತಿದೆ ಎಂಬುದಕ್ಕೆ ಈ ಸ್ಟೋರಿ ಉದಾಹರಣೆ. ಯಸ್ ಎಳೆ ಮಕ್ಕಳ ಬಳಸುವ ಕಂಪನಿಯ ಹೆಸರಿನಲ್ಲಿ ಡ್ರಗ್ಸ್ ಸರಬರಾಜು ಆಗ್ತಿದೆ. ಇಂತಹ ಕ್ರಿಮಿನಲ್ ಐಡಿಯಾಗಳು ಬರೋದು ಒನ್ಸ್ ಅಗೇನ್ ಫಾರಿನರ್ಸ್ ಗೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಅದರ ಡೀಟೇಲ್ಸ್ ಇಲ್ಲಿದೆ. ಜಸ್ಟೀಸ್ ನ್ವಾಫೋರ್ ಎಂಬ ನೈಜೀರಿಯನ್ ಪ್ರಜೆಯೊಬ್ಬನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಂದ ಹಾಗೆ ಈತನಿಂದ ರಿಕವರಿಯಾದ ಮಾದಕವಸ್ತುವಿನ ಮೌಲ್ಯ ಬರೋಬ್ಬರಿ ಆರುಕೋಟಿ. ಪೊಲೀಸರ ಭಯವಿಲ್ಲದೆ ಮತ್ತೆ ನೈಜೀರಿಯಾ ಪ್ರಜೆಗಳು ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರೋದು ಮತ್ತೊಮ್ಮೆ ಸಾಬೀತಾಗಿದೆ .
ಈ ಹಿಂದೆ ಮಕ್ಕಳ ಟಾಯ್ ಗಳಲ್ಲಿ ಡ್ರಗ್ಸ್ ಗಳನ್ನ ನಗರಕ್ಕೆ ತಂದು ಮಾರಾಟ ಮಾಡಲಾಗ್ತಿತ್ತು. ಕಷ್ಟಂಸ್ ಅಧಿಕಾರಿಗಳ ಪರಿಶೀಲನೆ ವೇಳೆ ಆ ಜಾಲ ಕೂಡ ಬಯಲಿಗೆ ಬಿದ್ದಿತ್ತು. ಈಗ ಎಳೆ ಮಕ್ಕಳು ಸೇವನೇ ಮಾಡುವ ಸೆರೋಲಾಕ್ ಪ್ಯಾಕೇಟ್ ನಲ್ಲಿ ಡ್ರಗ್ಸ್ ಗಳ ಸಪ್ಲೈ ಮಾಡುವ ದಂಧೆ ಕೂಡ ಹೊರಬಿದ್ದಿದೆ. ಸದ್ಯದ ಪರಿಸ್ಥಿತಿಯಲ್ಲಿ ನೈಜೀರಿಯನ್ಸ್ ಎಂದರೆ ಡ್ರಗ್ಸ್ ಎಂಬಷ್ಟರ ಮಟ್ಟಿಗೆ ಅದೇ ದೇಶದ ಪ್ರಜೆಗಳು ಸಿಕ್ಕಿಬೀಳ್ತಿದ್ದಾರೆ. ಇದರಿಂದ ಸಹಜವಾಗಿಯೇ ಯಾರೇ ನೈಜೀರಿಯಾ ಪ್ರಜೆಗಳನ್ನ ನೋಡಿದ್ರು.
ಸಾರ್ವಜನಿಕರೇ ಗಮನಿಸಿ: ಇಂದಿನಿಂದ 3 ದಿನ ಇ-ಸ್ವತ್ತು ತಂತ್ರಾಂಶ ಸ್ಥಗಿತ..! ಯಾಕೆ ಗೊತ್ತಾ..?
ಅವರ ಮೇಲೆ ಅನುಮಾನ ಬರುವ ರೀತಿ ಆಗಿದೆ. ಯಸ್ ಸಿಕ್ಕಿಬಿದ್ದಿರುವ ನೈಜೀರಿಯಾ ಪ್ರಜೆ ಬಟ್ಟೆ ವ್ಯಾಪಾರಕ್ಕೆಂದು ನಗರಕ್ಕೆ ಬಂದವನು ಆದರೆ ಮಾಡ್ತಿದ್ದಿದ್ದು ಡ್ರಗ್ಸ್ ದಂಧೆ. ಮುಂಬೈನ ಡ್ರಗ್ ಫ್ಯಾಕ್ಟರಿಯಿಂದ ಡ್ರಗ್ ನ್ನು ಬೆಂಗಳೂರಿಗೆ ತರಿಸಿಕೊಳ್ತಿದ್ದ. ಕೆಲ್ಲೋಸ್ , ಸೆರೊಲಾಕ್ ಬಾಕ್ಸ್ ನಲ್ಲಿ ತಂದರೆ ಗೊತ್ತಾಗಲ್ಲ ಎಂಬ ಕಾರಣಕ್ಕೆ ಆ ಬಾಕ್ಸ್ ನಲ್ಲಿ ತರಿಸುತ್ತಿದ್ದ. ಈ ಎಂಡಿಎಂಎ ಎ 1 ಕ್ವಾಲಿಟಿಯಷ್ಟು ಶುದ್ಧತೆಯನ್ನ ಹೊಂದಿದೆ. ಈ ಎಂಡಿಎಂಎಯ 1 ಗ್ರಾಂನಿಂದ ಮತ್ತೆ 10 ಗ್ರಾಂನಷ್ಟು ಸೆಕೆಂಡ್ ಕ್ವಾಲಿಟಿ ಎಂಡಿಎಂಎಯನ್ನ ತಯಾರು ಮಾಡಬಹುದು. ಹೀಗಾಗಿ ಎ ವನ್ ಕ್ವಾಲಿಟಿ ಡ್ರಗ್ ಗೆ ಭಾರಿ ಬೇಡಿಕೆ ಇದೆ.
ಅಂದ ಹಾಗೆ ಇಂತಹ ಪ್ಯೂರ್ ಎಂಡಿಎಂಎ ಸುಮಾರು ನಾಲ್ಕು ಕೇಜಿಯಷ್ಟು ಮನೆಯಲ್ಲಿ ಇಟ್ಟುಕೊಂಡಿದ್ದ. ಇದನ್ನ ಸಣ್ಣ ಸಣ್ಣ ಪ್ಯಾಕೇಟ್ ಗಳನ್ನಾಗಿ ಮಾಡಿ ಇಲ್ಲಿನ ಡೀಲರ್ ಗಳಿಗೆ ಮಾರಾಟ ಮಾಡ್ತಿದ್ದ. ಆ ಡೀಲರ್ ಗಳು ಅದರಿಂ್ ಮತ್ತಷ್ಟು ಡ್ರಗ್ ತಯಾರು ಮಾಡ್ತಿದ್ರು. ವಿದೇಶಿ ಪ್ರಜೆ ಡ್ರಗ್ ಬಗೆಗಿನ ಮಾಹಿತಿ ಒಡೆದ ಸಿಸಿಬಿ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಬೆಟ್ಟದಾಸಪುರದ ಮನೆಗೆ ದಾಳಿ ನಡೆಸಿದಾಗ ಗೋಧಿ ಹಿಟ್ಟು ಹರಡಿದಂತೆ ಮನೆಯಲ್ಲಿ ನಾಲ್ಕು ಡ್ರಗ್ ಒಣಗಿಸಲು ಇಟ್ಟಿದ್ದ. ಇನ್ನು ವಿದೇಶಿಗಳಲ್ಲಿ ಇಂಥಹ ಸಿಂಥಟಿಕ್ ಡ್ರಗ್ ಗಳು ದೊರೆತರೆ ಗರಿಷ್ಟ ಅಂದರೆ ಲೈಫ್ ಸೆಂಟೆನ್ಸ್ ವರೆಗೂ ಶಿಕ್ಷೆ ವಿಧಿಸಲಾಗುತ್ತೆ. ಆದ್ರೆ ಇಲ್ಲಿ ಯಾವ ಭಯವೂ ಇಲ್ಲದೆ ವಿದೇಶದಲ್ಲಿದ್ದರೂ ನೈಜೀರಿಯಾ ಪ್ರಜೆಗಳು ರಾಜಾರೋಷವಾಗಿ ದಂಧೆಯನ್ನ ನಡೆಸುತ್ತಿದ್ದಾರೆ.