ಬೆಂಗಳೂರು:- ತಂತ್ರಜ್ಙಾನ ಬಳಕೆಯಲ್ಲಿ ಹಿಂದುಳಿದ ಬೆಸ್ಕಾಂ ವಿರುದ್ಧ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದಾರೆ.
Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜು.27, 28, 30ರಂದು ವಿದ್ಯುತ್ ವ್ಯತ್ಯಯ!
ಇಡೀ ಪ್ರಪಂಚವೇ ಯುಪಿಐ ಪಾವತಿ ಸ್ವೀಕರಿಸುತ್ತಿದೆ. ಬೆಸ್ಕಾಂ ಏಕೆ ತಂತ್ರಜ್ಙಾನ ಬಳಸಿಕೊಳ್ಳಲು ಹಿಂದುಳಿದಿದೆ ಎಂದು ಪ್ರಶ್ನಿಸಿದ್ದು, ಈ ಬಗ್ಗೆ ಆಗಸ್ಟ್ 9 ರೊಳಗೆ ಪ್ರಮಾಣಪತ್ರ ಸಲ್ಲಿಸಲು ಬೆಸ್ಕಾಂ ಎಂಡಿಗೆ ಸೂಚನೆ ನೀಡಲಾಗಿದೆ.
2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 47 (5)ರ ಪ್ರಕಾರ ಪೂರ್ವಪಾವತಿ ಮೀಟರ್ ಒದಗಿಸುವಂತೆ ಮತ್ತು ಯುಪಿಐ ಪಾವತಿ ಸ್ವೀಕರಿಸಲು ಬೆಸ್ಕಾಂಗೆ ನಿರ್ದೇಶನ ನೀಡಬೇಕೆಂದು ಕೋರಿ ಬೆಂಗಳೂರಿನ ಹಿರಿಯ ನಾಗರಿಕರು ಸೀತಾಲಕ್ಷ್ಮಿ ಎಂಬುವರು ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಎನ್.ಎಸ್.ಸಂಜಯ್ ಗೌಡ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆ ಮಾಡಿದ್ದು, ರಸ್ತೆ ಬದಿ ವ್ಯಾಪಾರಿಗಳೂ ಯುಪಿಐ ಪಾವತಿ ಸ್ವೀಕರಿಸುತ್ತಾರೆ. ಎಲ್ಲ ರೀತಿಯ ಪಾವತಿಗೂ ಯುಪಿಐ ಏಕೆ ಅಳವಡಿಕೊಂಡಿಲ್ಲ. ಬೆಸ್ಕಾಂ ಎಲ್ಲ ಪಾವತಿಗಳನ್ನೂ ಯುಪಿಐ ಸ್ವೀಕರಿಸುತ್ತಿಲ್ಲವೆಂದು ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿದ್ದಾರೆ.
ವಿಚಾರಣೆಯ ವೇಳೆ ಬೆಸ್ಕಾಂ ಪರ ವಕೀಲರು, ಬೆಸ್ಕಾಂ ಕೌಂಟರ್ಗಳಲ್ಲಿ ಯುಪಿಐ ಪಾವತಿ ಮಾಡಲು ಅವಕಾಶವಿಲ್ಲ. ನಗದು ಪಾವತಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದು ವಾದಿಸಿದರು. ಆದಾಗ್ಯೂ, ಗ್ರಾಹಕರು ಬೆಸ್ಕಾಂ ಅಪ್ಲಿಕೇಶನ್ ಮೂಲಕ ಆನ್ಲೈನ್, ಯುಪಿಐ ಪಾವತಿಗಳನ್ನು ಮಾಡಬಹುದು. ಹಿರಿಯ ನಾಗರಿಕರು ಮತ್ತು ವಯಸ್ಸಾದವರು ಮನೆಯಲ್ಲಿ ಕುಳಿತು ಕೌಂಟರ್ಗೆ ಬರುವ ಅಗತ್ಯವಿಲ್ಲದೆ ಅಪ್ಲಿಕೇಶನ್ ಮೂಲಕ ಪಾವತಿಸಬಹುದಾಗಿದೆ ಎಂದು ಹೇಳಿದ್ದಾರೆ