ಬೆಂಗಳೂರು: ರಾಜ್ಯದಲ್ಲಿ ನೀಟ್ ಪರೀಕ್ಷೆ (NEET Exam) ರದ್ದು ಮಾಡಬೇಕು ಅಂತ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ (Ivan D’Souza) ಆಗ್ರಹಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ನೀಟ್ ರದ್ದು ಮಾಡಲು ಒತ್ತಾಯ ಮಾಡಿದ್ರು.
ನೀಟ್ ಪರೀಕ್ಷೆಯಲ್ಲಿ ದೊಡ್ಡ ಅವ್ಯವಹಾರವಾಗಿದೆ. ಪೇಪರ್ ಲೀಕ್ ಆಗಿ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಹಿಂದೆ ಸಿಇಟಿ ಪರೀಕ್ಷೆ (CET Exam) ಇದ್ದಾಗ ನಮ್ಮ ಮಕ್ಕಳಿಗೆ ಹೆಚ್ಚು ಅನುಕೂಲ ಆಗ್ತಿತ್ತು. ನೀಟ್ ವ್ಯವಸ್ಥೆ ಫೆಲ್ಯೂರ್ ಸಿಸ್ಟಮ್. ಇದರಿಂದ ಮಕ್ಕಳಿಗೆ ಅನಾನುಕೂಲ. ಈ ಪರೀಕ್ಷೆಯಲ್ಲಿ ಸಾಮಾಜಿಕ ನ್ಯಾಯ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ (Karnataka Government) ನೀಟ್ ರದ್ದು ಮಾಡಬೇಕು. ತಮ್ಮದೇ ಪರೀಕ್ಷಾ ವ್ಯವಸ್ಥೆ ಜಾರಿ ಮಾಡಬೇಕು ಅಂತ ಆಗ್ರಹಿಸಿದರು.
ಗೃಹಜ್ಯೋತಿ ಸ್ಕೀಂ: ವಿದ್ಯುತ್ ಶಕ್ತಿ ಉತ್ಪಾದನೆ ಕಂಪನಿಗಳಿಗೆ ಆರ್ಥಿಕ ಸಂಕಷ್ಟ: ಪರಿಷತ್ ಶಾಸಕ ಟಿ.ಎ.ಶರವಣ
ಇದಕ್ಕೆ ಸಚಿವ ಶರಣ ಪ್ರಕಾಶ್ ಪಾಟೀಲ್ ಉತ್ತರ ನೀಡಿ, ನೀಟ್ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಕೇಂದ್ರ ಸರ್ಕಾರ ಇದರಲ್ಲಿ ಎಡವಟ್ಟು ಮಾಡಿದೆ. ನೀಟ್ ಪರೀಕ್ಷೆ ಮಾಡೋದ್ರಲ್ಲಿ ಕೇಂದ್ರ ಎಡವಿದೆ. ಪೇಪರ್ ಲೀಕ್ ಆದಾಗ ನಾವು ತನಿಖೆ ಮಾಡಿ ಅಂತ ಆಗ್ರಹ ಮಾಡಿದ್ವಿ, ಕೇಂದ್ರ ಒಪ್ಪಲಿಲ್ಲ. ಬಳಿಕ ತಪ್ಪೊಪ್ಪಿಕೊಂಡು ಸಿಬಿಐ ತನಿಖೆಗೆ ಒಪ್ಪಿಸಿದೆ. ಸುಪ್ರೀಂ ಕೋರ್ಟ್ನಲ್ಲಿ (Supreme Court) ಕೇಸ್ ಇದೇ 18ಕ್ಕೆ ವಿಚಾರಣೆಯಿದೆ. ಏನು ತೀರ್ಮಾನ ಆಗುತ್ತದೆಯೋ ನೋಡೋಣ ಎಂದರು.