ತೆಲುಗು ಚಿತ್ರರಂಗದ ನಟಿ ಕಂ ನಿರೂಪಕಿ ಅನಸೂಯಾ ಭಾರದ್ವಾಜ್ ಆಗಾಗ ತಮ್ಮ ಹಾಟ್ ಫೋಟೋ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟಿ ಮತ್ತೆ ಹಾಟ್ ಅವತಾರ ತಾಳಿದ್ದು ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
‘ಜಬರ್ದಸ್ತ್’ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿ ಆ್ಯಂಕರ್ ಆಗಿ ಸ್ಟಾರ್ ಇಮೇಜ್ ಗಿಟ್ಟಿಸಿಕೊಂಡಿದ್ದ ಪುಷ್ಪ ಲೇಡಿ ವಿಲನ್ ಅನಸೂಯಾ ಭಾರದ್ವಾಜ್ ಹೆಚ್ಚಾಗಿ ತಮ್ಮ ಫೋಟೋಗಳ ಮೂಲಕವೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಆಗಾಗ ಗ್ಲಾಮರಸ್ ಫೋಟೋಗಳ ಮೂಲಕ ಸಾಮಾಜಿಕ ಜಾಲಾ ತಾಣದಲ್ಲಿ ಸದ್ದು ಮಾಡುವ ನಟಿ ಇದೀಗ ಬಾಸ್ ಲೇಡಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಿರುತೆರೆಯಲ್ಲಿ ಸದ್ದು ಮಾಡಿದ್ದ ನಟಿ ಇದೀಗ ಬೆಳ್ಳಿತೆರೆ ಮೇಲೆ ಮಿಂಚುತ್ತಿದ್ದು, ಇತ್ತೀಚೆಗೆ ನಟಿ ಶೇರ್ ಮಾಡಿದ ಬೋಲ್ಡ್ ಮತ್ತು ಹಾಟ್ ಫೋಟೋಗಳು ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸುತ್ತಿವೆ.
ಇತ್ತೀಚೆಗೆ ನಟಿ ಯಾವ ಫೊಟೋ ಶೇರ್ ಮಾಡಿದರೂ ಕೂಡಾ ನೆಟ್ಟಿಗರು ಕಮೆಂಟ್ ಮಾಡುತ್ತಲೇ ಇದ್ದಾರೆ. ಯಾವುದೇ ಫೋಟೋ ಅಪ್ಲೋಟ್ ಮಾಡಿದರೂ ರಿಯಾಕ್ಟ್ ಮಾಡುತ್ತಿದ್ದಾರೆ. ಕೊನೆಗೆ ಅನಸೂಯಾ ತನ್ನ ಒಳಉಡುಪು ತೋರಿಸುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಜನರು ನಿಮ್ಮ ಒಳಉಡುಪು ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅನಸೂಯಾ ಕೈಯಲ್ಲಿ ಹಲವು ಪ್ರಾಜೆಕ್ಟ್ಗಳಿವೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸುತ್ತಿದ್ದಾರೆ. ಇತ್ತೀಚೆಗೆ, ಅನಸೂಯಾ ಅವರು ವಿಮಾನ ಚಿತ್ರದಲ್ಲಿ ವೇಶ್ಯೆಯ ಪಾತ್ರಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ಅದೇ ರೀತಿ ಪೆಡಕಾಪು ಸಿನಿಮಾದಲ್ಲಿ ಅನಸೂಯಾ ಪಾತ್ರಕ್ಕೆ ನೋಡುಗರು ಮೆಚ್ಚುಗೆ ಸೂಚಿಸಿದ್ದರು.
ಸಿನಿಮಾಗಳ ಮೂಲಕ ಹೆಚ್ಚು ಹೈಲೈಟ್ ಆಗುತ್ತಿರುವ ಅನಸೂಯಾ ಭಾರದ್ವಾಜ್ ಈಗ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ಈ ಚೆಲುವೆ ‘ಹರಿಹರ ವೀರಮಲ್ಲು’, ‘ಪುಷ್ಪ 2’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ತಮಿಳಿನಲ್ಲಿ ‘ಫ್ಲ್ಯಾಶ್ಬ್ಯಾಕ್’ ಸೇರಿದಂತೆ ಕೆಲವು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ.