ಮೈಸೂರು:- ಮೈಸೂರಿನ ಹಲವೆಡೆ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಪವರ್ ಕಟ್ ಇರಲಿದೆ. ಇಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ತೊಣಚಿಕೊಪ್ಪಲು, ಹರಿಹರ ಹೋಟೆಲ್, ಅಮ್ಮ ಕಾಂಪ್ಲೆಕ್ಸ್, ನ್ಯೂ ಕಾಂತರಾಜ ಅರಸ್ ರಸ್ತೆ, ಕಾಂಪ್ಲೆಕ್ಸ್,ಅರವಿಂದನಗರ, ಕುವೆಂಪುನಗರ ಎಂ ಬ್ಲಾಕ್, ಎನ್ ಬ್ಲಾಕ್, ಕೆ ಬ್ಲಾಕ್, ಕುವೆಂಪುನಗರ ಕೆ.ಎಚ್.ಬಿ ಕಾಲೋನಿ, ಅನಿಕೇತನ ರಸ್ತೆ, ಪಡುವಣ ರಸ್ತೆ, ಸರಸ್ವತಿಪುರಂ 1 ರಿಂದ 4ನೇ ಮುಖ್ಯರಸ್ತೆ, ವಿಶ್ವಮಾನವ ಜೋಡಿ ರಸ್ತೆ, ಪಂಚಮಂತ್ರ ರಸ್ತೆ, ಎಂ ಬ್ಲಾಕ್ ಲೈಬ್ರರಿ, ಪಾಂಡುರಂಗ ದೇವಸ್ಥಾನ, ವಿವೇಕಾನಂದ ವೃತ್ತ, ವಿವೇಕಾನಂದ ನಗರ, ಇ.ಡಬ್ಲ್ಯು.ಎಸ್ ಗಣಪತಿ ದೇವಸ್ಥಾನ, ಎಂ.ಎಲ್.ಸಿ ವಿಶ್ವನಾಥ್ ಮನೆ ಸುತ್ತಮುತ್ತ, ಕೆನರಾ ಬ್ಯಾಂಕ್, ಬಿ.ಜಿ.ಎಸ್ ಬಾಲ ಜಗನ್ನಾಥ ಶಾಲೆ, ಎಸ್ ಬಿಎಂ ಕಾಲೋನಿ, ಶಿವ ಟೆಂಪಲ್, ಸೂರ್ಯ ಲೇಔಟ್, ನಿಮಿಷಾಂಬ ಲೇಔಟ್, ಕಂದಾಯನಗರ 3ನೇ ಹಂತ, ಗಿರಿಯಪ್ಪ ನಿಂಗೇಗೌಡ ಲೇಔಟ್, ಮಹಾಲಿಂಗೇಶ್ವರ ದೇವಸ್ಥಾನ, ಕಬಿನಿ ಲೇಔಟ್, ಎಸ್.ಎಂ.ಎಸ್ ಸ್ಕೂಲ್ ಲೇಔಟ್, ಕಂದಾಯ ಲೇಔಟ್, ಹಂಸ ಲೇಔಟ್ 1ನೇ ಹಂತ, ಗಗನ ಶೇಖರ ಲೇಔಟ್, ಹುಲಿ ನಾರಾಯಣಪ್ಪ ಲೇಔಟ್, ಭವ್ಯ ಭಾರತಿ ಲೇಔಟ್, ಎಂ.ಡಿ.ಸಿ.ಸಿ ಬ್ಯಾಂಕ್ ಎಂಪ್ಲಾಯಿಸ್ ಲೇಔಟ್ ಇಲ್ಲೆಲ್ಲ ಪವರ್ ಕಟ್ ಆಗಲಿದೆ.
ಟಿ.ಕೆ.ಸ್ಟುಡಿಯೋ ಲೇಔಟ್, ಕಂದಾಯ ಲೇಔಟ್ 2ನೇ ಹಂತ, ತಪೋವನ, ಅನ್ನಪೂರ್ಣ ಲೇಔಟ್, ಎಂಡಿಸಿಸಿ ಲೇಔಟ್, ಶ್ರೀರಾಂಪುರ, ಪ್ರೀತಿ ಲೇಔಟ್, ಡಿ.ವಿ.ಜಿ. ಲೇಔಟ್, ಟಿ.ಕೆ. ರಾಮ್ ಲೇಔಟ್, ಚಿದಾನಂದ ಮತ್ತು ರಕ್ಷಾ ಲೇಔಟ್, ಆರ್.ಕೆನಗರ ಕೆ ಬ್ಲಾಕ್, ವಾಸು ಲೇಔಟ್, ಮುಡಾ ಎಂಪ್ಲಾಯಿಸ್ ಲೇಔಟ್, ಮಾಧವ ಪಾರ್ಕ್, ಇ ಮತ್ತು ಎಫ್ ಬ್ಲಾಕ್, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.