ಗದಗ:- ಗದಗ ಟ್ರಾಫಿಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೇಕಾಬಿಟ್ಟಿಯಾಗಿ ಓಡಾಡ್ತಿದ್ದ 25 ಕ್ಕೂ ಹೆಚ್ಚು ಟಂ ಟಂ ಸೀಜ್ ಮಾಡಿದ್ದಾರೆ.
ಟಂ ಟಂ ಗಳ ವಿರುಧ್ಧ ಡಿಫೆಕ್ಟಿವ್ ನಂಬರ್ ಪ್ಲೇಟ್, ರ್ಯಾಶ್ ಡ್ರೈವ್ ದೂರು ಕೇಳಿ ಬಂದ ಹಿನ್ನೆಲೆ ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಗದಗ ನಗರದ ಪ್ರಮುಖ ಸರ್ಕಲ್ ಗಳಲ್ಲಿ ಸ್ಪೆಶಲ್ ಡ್ರೈವ್ ನಡೆದಿದ್ದು, ಬೇಕಾಬಿಟ್ಟಿಯಾಗಿ ಓಡಾಡ್ತಿದ್ದ ಟಂ ಟಂ ಗಳಿಗೆ ಶಾಕ್ ಕೊಟ್ಟಿದೆ.
ಡ್ರೈವಿಂಗ್ ಲೈಸನ್ಸ್, ಇನ್ಶೂರೆನ್ಸ್, ನಂಬರ್ ಪ್ಲೇಟ್ ಇಲ್ಲದ ಟಂ ಟಂ ಗಳಿಗಾಗಿ ಸ್ಪೆಶಲ್ ಡ್ರೈವ್ ನಡೆದಿದೆ. ಸರಿಯಾದ ದಾಖಲೆ ಇಲ್ಲದ 25 ಕ್ಕೂ ಹೆಚ್ಚು ಟಂಟಂ ಸೀಜ್ ಮಾಡಲಾಗಿದೆ.
ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.