ಬೆಂಗಳೂರು:- ರೇವ್ ಪಾರ್ಟಿ ಕೇಸ್ ಗೆ ಸಂಬಧಪಟ್ಟಂತೆ ನಟಿ ಹೇಮಾ ಅವರು ಬುರ್ಕಾ ಧರಿಸಿ ವಿಚಾರಣೆಗೆ ಬಂದಿದ್ದಾರೆ.
ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹೃದಯಾಘಾತ.. ವ್ಯಕ್ತಿ ಸಾವು!
ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್. ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ ಮಾಡಿದ ಆರೋಪದಲ್ಲಿ ಅವರ ಬಂಧನ ಆಗಿದೆ. ಈ ಕೇಸ್ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ 2 ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಇಂದು ಬುರ್ಕಾ ಧರಿಸಿ ಹೇಮಾ ಬಂದಿದ್ದಾರೆ.
ಡ್ರಗ್ಸ್ ಪಾರ್ಟಿಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು ಎಂಬ ಮಾಹಿತಿ ಇದೆ. ರೇವ್ ಪಾರ್ಟಿ ನಡೆದ ಸ್ಥಳದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾಗಲೂ ಹೇಮಾ ಕಳ್ಳಾಟ ಆಡಿದ್ದರು. ಅದೇ ಫಾರ್ಮ್ಹೌಸ್ನ ಆವರಣದಲ್ಲಿ ವಿಡಿಯೋ ಮಾಡಿ, ‘ನಾನು ಹೈದರಾಬಾದ್ನ ಫಾರ್ಮ್ಹೌಸ್ನಲ್ಲಿ ಇದ್ದೇನೆ ಎಂದು ಸುಳ್ಳು ಹೇಳಿ ವಿಡಿಯೋ ಮಾಡಿದ್ದರು.