ನಟಿ ದೀಪಿಕಾ ಪಡುಕೋಣೆ ಸದ್ಯ ಅಮ್ಮನಾಗುವ ಖುಷಿಯಲ್ಲಿದ್ದಾರೆ. ಸದ್ಯದಲ್ಲೇ ದೀಪಿಕಾ ಮನೆಗೆ ಹೊಸ ಅತಿಥಿಯ ಆಗಮನವಾಗುತ್ತಿದ್ದು ಆ ಸಂತಸದ ಕ್ಷಣಕ್ಕಾಗಿ ಬ್ಯೂಟಿ ಕಾಯುತ್ತಿದ್ದಾರೆ. ತಾಯಿಯಾಗುತ್ತಿರುವ ದೀಪಿಕಾರನ್ನು ನೋಡಿದ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಬ್ಯೂಟಿ ಬ್ರ್ಯಾಂಡ್ 82°E ಗಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಹಳದಿ ಬಣ್ಣದ ಗೌನ್ ಧರಿಸಿದ್ರು. ಈ ವೇಳೆ ನಟ ಧರಿಸಿದ್ದ ಡ್ರೆಸ್ ನ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಳದಿ ಡ್ರೆಸ್ ನಲ್ಲಿ ದೀಪಿಕಾ ತುಂಬಾ ಮುದ್ದಾಗಿ ಕಾಣ್ತಿದ್ದಾರೆ ಎಂದು ಫ್ಯಾನ್ಸ್ ಕೂಡ ಕೊಂಡಾಡಿದ್ರು. ಇದೀಗ ನಟಿ ತಾನು ಧರಿಸಿದ್ದ ಗೌನ್ ಅನ್ನು ನಟಿ ಮಾರಾಟಕ್ಕಿಟ್ಟಿದ್ದು, ಸೇಲ್ ಗಿಟ್ಟ ಕೆಲವೇ ಕ್ಷಣಗಳಲ್ಲಿ ಗೌನ್ ಮಾರಾಟವಾಗಿದೆ.
ದೀಪಿಕಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಗೌನ್ ಅನ್ನು ಮಾರಾಟ ಮಾಡುತ್ತಿರುವುದಾಗಿ ಅನೌನ್ಸ್ ಮಾಡಿದ್ರು. ಕೆಲವೇ ನಿಮಿಷಗಳಲ್ಲಿ ದೀಪಿಕಾ ಗೌನ್ ಮಾರಾಟವಾಗಿದೆ ಎಂದು ಮತ್ತೆ ಘೋಷಿಸಿದ್ರು. ನಟಿ ಧರಿಸಿದ್ದ ಸಿಂಪಲ್ ಗೌನ್ ಅನ್ನು ₹34,000ಕ್ಕೆ ಸೇಲ್ ಆಗಿದೆ. ಗೌನ್ ಮಾರಾಟ ಮಾಡಿ ಬಂದ ಹಣವನ್ನು ನಟಿ ಸಮಾಜಮುಖಿ ಕಾರ್ಯಕ್ಕೆ ಬಳಕೆ ಮಾಡಲಿದ್ದಾರಂತೆ.
ದೀಪಿಕಾ ಧರಿಸಿದ್ದು ‘ಎಂಪೈರ್ ಕಟ್ ಕಾಟನ್ ಮಿಡಿ ವಿತ್ ಡ್ರಾಮಾಟಿಕ್ ಫ್ಲೇರ್’ ಡಿಸೈನರ್ ಎಂಪೈರ್ ಡ್ರೆಸ್ ಆಗಿತ್ತು. 34,000 ಸಾವಿರಕ್ಕೆ ಮಾರಾಟವಾಗಿದೆ. ಕೆಲವು ನಿಮಿಷಗಳ ನಂತರ ದೀಪಿಕಾ ಗೌನ್ ಖರೀದಿಸಿದವರನ್ನು ಟ್ಯಾಗ್ ಮಾಡುವ ಮೂಲಕ ‘ಸೋಲ್ಡ್ ಔಟ್’ ಎಂದು ಬರೆದಿರುವ ಫೋಟೋ ಹಂಚಿಕೊಂಡರು. 20 ನಿಮಿಷಗಳಲ್ಲಿ ಗೌನ್ ಮಾರಾಟವಾಗಿದೆ.
ಬಾಲಿವುಡ್ ಟಾಪ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗ್ತಿರುವ ಖುಷಿಯಲ್ಲಿದ್ದಾರೆ. ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ದೀಪಿಕಾ ಕೂಡ ತನ್ನ ಪ್ರೆಗ್ನೆನ್ಸಿಯ ಪ್ರತಿ ಕ್ಷಣವನ್ನು ಎಂಜಾಯ್ ಮಾಡ್ತಿದ್ದಾರೆ. ಈ ವೇಳೆ ದೀಪಿಕಾ ಬೇಬಿ ಬಂಪ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಕಲಿ ಬೇಬಿ ಬಂಪ್ ಎಂದು ಅನೇಕರು ನಟಿಯನ್ನು ಟ್ರೋಲ್ ಮಾಡಿದ್ರು. ಬಳಿಕ ನಟಿ ವಿಡಿಯೋ ಶೇರ್ ಮಾಡುವ ಮೂಲಕ ಟ್ರೋಲ್ಗಳ ಬಾಯಿಬಿಚ್ಚಿಸಿದ್ದಾರೆ.
ನಟಿ ದೀಪಿಕಾ ಗರ್ಭಿಣಿ ಅಲ್ಲ, ಬಾಡಿಗೆ ತಾಯ್ತನ ಮೂಲಕ ನಟಿ ತಾಯಿಯಾಗ್ತಿದ್ದಾರೆ ಎನ್ನುವ ಸುಳ್ಳು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಾಜಿ ಬಾಯ್ಫ್ರೆಂಡ್ ರಣಬೀರ್ ಕಪೂರ್ ಅವರ ಪತ್ನಿ, ನಟಿ ಆಲಿಯಾ ಭಟ್ ಕೂಡ ನಟಿ ದೀಪಿಕಾ ಪರ ನಿಂತರು. ಇದೀಗ ನಟಿ ತನ್ನ ಬೇಬಿ ಬಂಪ್ ಅನ್ನು ವಿಶೇಷವಾಗಿ ತೋರಿಸುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು.
ಸೆಪ್ಟೆಂಬರ್ನಲ್ಲಿ ದೀಪಿಕಾ ಪಡುಕೋಣೆ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಹೀಗಾಗಿ ನಟಿ ಈ ಮೊದಲು ತಾವು ಒಪ್ಪಿಕೊಂಡಿದ್ದು ಸಿನಿಮಾಗಳನ್ನು ಕಂಪ್ಲೀಟ್ ಮಾಡಿದ್ದಾರೆ.