ಟೊಮೆಟೊ ಹಣ್ಣು ತರಕಾರಿ ಅಲ್ಲ ಬದಲಾಗಿ ಹಣ್ಣು. ಇದು ಭಕ್ಷ್ಯದ ರುಚಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಲೈಕೋಪೀನ್ ಎಂಬ ವಸ್ತುವಿನಿಂದ ಸಮೃದ್ಧವಾಗಿದೆ. ಪೊಟ್ಯಾಸಿಯಮ್, ವಿಟಮಿನ್ ಬಿ, ಇ ಮತ್ತು ಇತರ ಪೋಷಕಾಂಶಗಳನ್ನು ಕೆಂಪು ಬಣ್ಣದ ಈ ಟೊಮೆಟೊ ಹಣ್ಣುಗಳು ಹೊಂದಿವೆ.
IPL 2024: ಡು ಆರ್ ಡೈ ಪಂದ್ಯದಲ್ಲಿ ಲಕ್ನೋ ಗೆ 208 ಬೃಹತ್ ಟಾರ್ಗೆಟ್ ಕೊಟ್ಟ ಡಿಸಿ..!
ಆದರೆ ಎಷ್ಟೋ ಬಾರಿ ಅಡುಗೆ ಮಾಡುವಾಗ ಟೊಮೆಟೊ ಹಾಕುವುದನ್ನು ಅನೇಕ ಮಂದಿ ಮರೆತು ಬಿಡುತ್ತಾರೆ. ಇನ್ನೂ ಕೆಲವೊಮ್ಮೆ ಅಡುಗೆ ಮಾಡಲು ಟೊಮೆಟೊ ಇರುವುದೇ ಇಲ್ಲ. ಅಂತಹ ವೇಳೆ ಗೃಹಿಣಿಯರು ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬದಲಿಗೆ ಟೊಮೆಟೊ ಮನೆಯಲ್ಲಿಲ್ಲದೇ ಇರುವಾಗ ಈ ಪದಾರ್ಥಗಳನ್ನು ಬೆರೆಸಿದರೆ ಸಾಕು. ಆಹಾರಕ್ಕೆ ಇವೆ ಹುಳಿ ರುಚಿಯನ್ನು ನೀಡುತ್ತದೆ. ಹಾಗಾದ್ರೆ ಅವು ಯಾವುವು ಅಂತೀರಾ? ಈ ಸ್ಟೋರಿ ಓದಿ.
ಮೊಸರು: ಟೊಮೆಟೊ ಬದಲಿಗೆ ನೀವು ಮೊಸರು ಬೆರೆಸಿ ಆಹಾರ ತಯಾರಿಸಬಹುದು. ಮೊಸರಿನ ಆಮ್ಲೀಯ ರುಚಿಯು ಮಸಾಲೆಗಳೊಂದಿಗೆ ಚೆನ್ನಾಗಿ ಬೆರೆತು ಟೊಮೆಟೊ ಹಣ್ಣಿನ ರುಚಿಯನ್ನೇ ನೀಡುತ್ತದೆ. ನೀವು ತಯಾರಿಸುವ ಆಹಾರಕ್ಕೆ ಟೊಮೆಟೊವಷ್ಟೇ ಉತ್ತಮ ರುಚಿ ಬೇಕಾದರೆ 2 ಅಥವಾ 3 ದಿನಗಳವರೆಗೂ ಫ್ರಿಜ್ನಲ್ಲಿ ಸಂಗ್ರಹಿಸಿಟ್ಟ ಮೊಸರನ್ನು ಬಳಸಬಹುದು.
ಟೊಮೆಟೊ ಬದಲಿಗೆ ಆಹಾರಕ್ಕೆ ಬಳಸಬಹುದಾದ ಇನ್ನೊಂದು ಪದಾರ್ಥವೆಂದರೆ ಅದು ಹುಣಸೆಹಣ್ಣು. ಸ್ವಲ್ಪ ಪ್ರಮಾಣದ ಹುಣಸೆಹಣ್ಣನ್ನು ತೆಗೆದುಕೊಂಡು ಅದನ್ನು 15-20 ನಿಮಿಷಗಳ ಕಾಲ ನೆನೆಸಿ, ನಂತರ ಸ್ವಲ್ಪ ನೀರು ಸೇರಿಸಿ ಫಿಲ್ಟರ್ ಮಾಡಿ ಮತ್ತು ಸಾರಿಗೆ ಹಾಕಿ. ಹುಣಸೆಹಣ್ಣನ್ನು ಗ್ರೇವಿಯನ್ನು ಗಟ್ಟಿಯಾಗಿಸಲು ಸಹ ಬಳಸಲಾಗುತ್ತದೆ
ನೆಲ್ಲಿಕಾಯಿ: ಟೊಮೆಟೊ ಬದಲಿಗೆ ನೆಲ್ಲಿಕಾಯಿಯನ್ನು ಸಹ ಭಕ್ಷ್ಯದಲ್ಲಿ ಬಳಸಬಹುದು. ಆಗ ಆಹಾರಕ್ಕೆ ಸ್ವಲ್ಪ ಹುಳಿ ಬರುತ್ತದೆ. ಆದರೆ ಹೆಚ್ಚಾಗಿ ನೆಲ್ಲಿಕಾಯಿ ಬಳಸಿದರೆ ಆಹಾರಕ್ಕೆ ಹೆಚ್ಚು ಹುಳಿ ಬೆರೆತು ರುಚಿ ಹಾಳಾಗುತ್ತದೆ. ಆದ್ದರಿಂದ ನೆಲ್ಲಿಕಾಯಿ ಬಳಸುವಾಗ ಎಚ್ಚರಿಕೆವಹಿಸಿ
ಮಾವಿನಕಾಯಿ ಪುಡಿ: ಇದು ಟೊಮೆಟೊದಂತೆಯೇ ಹುಳಿ ರುಚಿಯನ್ನು ಹೊಂದಿದೆ. ಅಲ್ಲದೇ ಇದರ ಬೆಲೆ ಕೂಡ ಅಗ್ಗವಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಒಂದು ಟೀಚಮಚ ಅಥವಾ ನಿಮಗೆ ಬೇಕಾದಷ್ಟು ಮಾವಿನ ಪುಡಿಯನ್ನು ತೆಗೆದುಕೊಂಡು ಆಹಾರಕ್ಕೆ ಸೇರಿಸಿ. ನಿಮಗೆ ಇಷ್ಟವಿದ್ದರೆ ಮಾವಿನಕಾಯಿ ಪುಡಿ ಬದಲು ಹಸಿ ಮಾವಿನಕಾಯಿಯನ್ನು ಸಹ ನೀವು ಸೇರಿಸಬಹುದು.