ದ್ರಾಕ್ಷಿಯು ಬೇಗನೆ ಕೆಟ್ಟು ಹೋಗುವುದನ್ನು ತಪ್ಪಿಸಲು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಹೇಗೆಲ್ಲಾ ಅವುಗಳನ್ನು ಸಂಗ್ರಹಿಸಿಡಬೇಕು ಅಂತ ನೋಡಿಕೊಂಡು ಬರೋಣ
ದ್ರಾಕ್ಷಿ ಮಾರುಕಟ್ಟೆಯಿಂದ ಮನೆಗೆ ತಂದಾಗ ತುಂಬಾನೇ ಶ್ ಆಗಿರುತ್ತವೆ, ಆದರೆ ಅದನ್ನು ಒಂದೆರಡು ದಿನಗಳ ಕಾಲ ಮನೆಯಲ್ಲಿ ಹಾಗೆಯೇ ತೆರೆದಿಟ್ಟರೆ, ಅದು ಇಟ್ಟಲ್ಲಿಯೇ ತುಂಬಾನೇ ಹಣ್ಣಾಗಿ ಕೊಳೆತು ಹೋಗುತ್ತವೆ. ಅನೇಕರು ದ್ರಾಕ್ಷಿ ಹಣ್ಣುಗಳನ್ನು ಹಾಗೆಯೇ ತೆರೆದ ಪಾತ್ರೆಯಲ್ಲಿ ಅಥವಾ ಡೈನಿಂಗ್ ಟೇಬಲ್ ಮೇಲಿರುವ ಹಣ್ಣಿನ ಒಂದು ಚಿಕ್ಕ ಬುಟ್ಟಿಯಲ್ಲಿ ಇಡುತ್ತಾರೆ. ಹೀಗೆ ಇಟ್ಟ ದ್ರಾಕ್ಷಿ ಒಂದೆರಡು ದಿನಗಳಲ್ಲಿ ತುಂಬಾನೇ ಹಣ್ಣಾಗಿ, ಕೊನೆಗೆ ಕೊಳೆತು ಹೋಗುತ್ತವೆ. ಇನ್ನೂ ಕೆಲವರು ದ್ರಾಕ್ಷಿ ಹಣ್ಣನ್ನು ತಮ್ಮ ಫ್ರಿಡ್ಜ್ಗಳಲ್ಲಿ ಸಂಗ್ರಹಿಸಿಟ್ಟಿರುತ್ತಾರೆ, ಇವು ತಕ್ಕ ಮಟ್ಟಿಗೆ ತಾಜಾವಾಗಿರುತ್ತವೆ ಅನ್ನೋದು ಅವರ ಅನಿಸಿಕೆಯಾಗಿರುತ್ತದೆ
ಮಾರುಕಟ್ಟೆಯಿಂದ ತಂದ ದ್ರಾಕ್ಷಿಯನ್ನು ಕೂಡಲೇ ತಿನ್ನುವುದು ಒಳ್ಳೆಯದೇ ಅಥವಾ ಅವುಗಳನ್ನು ಸ್ವಲ್ಪ ಕಾಲ ಹಾಗೆಯೇ ಸಂಗ್ರಹಿಸಿಟ್ಟುಕೊಂಡು ತಿನ್ನುವುದು ಒಳ್ಳೆಯದೇ ಅನ್ನೋ ವಿಚಾರದ ಬಗ್ಗೆ ಅನೇಕರಿಗೆ ಅನೇಕ ರೀತಿಯ ಗೊಂದಲಗಳು ಇರುತ್ತವೆ. ಬನ್ನಿ ಹಾಗಾದರೆ ದ್ರಾಕ್ಷಿಯು ಬೇಗನೆ ಕೆಟ್ಟು ಹೋಗುವುದನ್ನು ತಪ್ಪಿಸಲು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಹೇಗೆಲ್ಲಾ ಅವುಗಳನ್ನು ಸಂಗ್ರಹಿಸಿಡಬೇಕು ಅಂತ ನೋಡಿಕೊಂಡು ಬರೋಣ.
ಯಾವಾಗ ಒಳ್ಳೆಯ ದ್ರಾಕ್ಷಿಗಳು ಕೆಟ್ಟು ಹೋಗುತ್ತವೆ? ಶಿಲೀಂಧ್ರಗಳು, ಯೀಸ್ಟ್ ಮತ್ತು ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಜೀವಿಗಳಿಂದ ಕಲುಷಿತಗೊಂಡಾಗ ಈ ದ್ರಾಕ್ಷಿಗಳು ಬೇಗನೆ ಕೆಟ್ಟು ಹೋಗುತ್ತವೆ. “ದ್ರಾಕ್ಷಿಗಳು ಕೆಡುತ್ತಿವೆ ಅಂತ ನಾವು ಅವುಗಳ ಹುಳಿ ವಾಸನೆ ಅಥವಾ ರುಚಿಯಿಂದ, ದ್ರಾಕ್ಷಿಗಳು ಸಮಯ ಕಳೆದಂತೆ ತೇವಾಂಶವನ್ನು ಕಳೆದುಕೊಳ್ಳುತ್ತಿರುವ, ದ್ರಾಕ್ಷಿಯ ಚರ್ಮವು ಬಿರುಕು ಬಿಟ್ಟು ರಸ ಸ್ರವಿಸುವಾಗ ತಿಳಿದುಕೊಳ್ಳಬಹುದು” ಎಂದು ನೋಂದಾಯಿತ ಆಹಾರ ಪದ್ಧತಿಯ ಪೌಷ್ಟಿಕತಜ್ಞ ಥೆರೆಸಾ ಜೆಂಟೈಲ್ ಅವರು ಹೇಳುತ್ತಾರೆ.
ಹೀಗೆ ಕೆಟ್ಟು ಹೋದ ಮತ್ತು ಕೆಡಬಹುದಾದ ದ್ರಾಕ್ಷಿಯನ್ನು ಡಸ್ಟ್ ಬಿನ್ ಎಸೆಯಲು ನೀವು ರುಚಿ ನೋಡಬೇಕಿಲ್ಲ, ಅವುಗಳನ್ನು ನೋಡಿದರೆ ಸಾಕು ಅವು ಹೇಗಿವೆ ಅಂತ ಅರ್ಥವಾಗುತ್ತದೆ.
ದ್ರಾಕ್ಷಿಯನ್ನು ತುಂಬಾ ದಿನಗಳವರೆಗೆ ತಾಜಾವಾಗಿಡುವುದು ಹೇಗೆ? ಮೊದಲಿಗೆ, ದ್ರಾಕ್ಷಿ ಮಾರುಕಟ್ಟೆಯಲ್ಲಿ ಕೊಳ್ಳುವಾಗ ಅದರ ಬಗ್ಗೆ ಸ್ವಲ್ಪ ಎಚ್ಚರ ವಹಿಸಿರಿ. ನೀವು ದ್ರಾಕ್ಷಿ ಹಣ್ಣಗಳನ್ನ ಖರೀದಿಸುವಾಗ, ಕೊಬ್ಬಿದ ಮತ್ತು ದುಂಡಗಿನ ಮತ್ತು ಕಾಂಡಗಳಿಗೆ ದೃಢವಾಗಿ ಅಂಟಿಕೊಂಡಿರುವ ಹಣ್ಣುಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಿ. ಖರೀದಿಸುವಾಗ ಮೃದುವಾಗಿರುವ, ಜಿಗುಟಾದ, ಬಣ್ಣಬಣ್ಣದ ಅಥವಾ ಸುಕ್ಕುಗಟ್ಟಿದ ದ್ರಾಕ್ಷಿಗಳನ್ನು ಖರೀದಿಸಬೇಡಿ.
ನೀವು ಮನೆಗೆ ಬಂದ ನಂತರ, ನೀವು ಅವುಗಳನ್ನು ತಿನ್ನುವಾಗ ಮಾತ್ರವೇ ಚೆನ್ನಾಗಿ ತೊಳೆದುಕೊಳ್ಳಿ. ಹಣ್ಣುಗಳನ್ನು ತೊಳೆಯುವುದು ತೇವಾಂಶವನ್ನು ಸೇರಿಸುತ್ತದೆ, ಅದು ಹಾಳಾಗಲು ಸೂಕ್ತವಾದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ನೀವು ಯಾವಾಗಲೂ ಹಣ್ಣುಗಳನ್ನು ಫ್ರೀಡ್ಜ್ನಲ್ಲಿ ಇರಿಸುವ ಮೊದಲು ತೊಳೆದರೆ, ಮೊದಲು ಅದನ್ನು ಚೆನ್ನಾಗಿ ಒಣಗಿಸಲು ಮರೆಯದಿರಿ
ದ್ರಾಕ್ಷಿಯನ್ನು ಎಲ್ಲಿ ಮತ್ತು ಹೇಗೆ ಸಂರಕ್ಷಿಸಿಟ್ಟರೆ ಒಳ್ಳೆಯದು? “ದ್ರಾಕ್ಷಿಯನ್ನು ನಿಮ್ಮ ಕ್ರಿಸ್ಪರ್ ಡ್ರಾಯರ್ನ ಹಿಂಭಾಗದಲ್ಲಿ ರೆಫ್ರಿಜರೇಟರ್ನಲ್ಲಿ ಇರಿಸಿ, ಅಲ್ಲಿ ಅದು ಚೆನ್ನಾಗಿ ಮತ್ತು ತಂಪಾಗಿರುತ್ತದೆ, ಗಾಳಿ ಚೀಲದಲ್ಲಿ ಇರಿಸಿ” ಅಂತ ಜೆಂಟೈಲ್ ಹೇಳುತ್ತಾರೆ. ದ್ರಾಕ್ಷಿಯನ್ನು ಸಂರಕ್ಷಿಸಿಡಲು ನೀವು ಮರುಬಳಕೆ ಮಾಡಬಹುದಾದ ಹತ್ತಿ, ಜಾಲರಿ ಅಥವಾ ಮಸ್ಲಿನ್ ಚೀಲವನ್ನು ಆಯ್ಕೆ ಮಾಡಬಹುದು. ಸೇಬುಗಳು, ಆವಕಾಡೊಗಳು, ಟೊಮೆಟೊಗಳು ಅಥವಾ ಎಥಿಲೀನ್ ಅನ್ನು ಬಿಡುಗಡೆ ಮಾಡುವ ಇತರ ರೀತಿಯ ಉತ್ಪನ್ನಗಳ ಬಳಿ ದ್ರಾಕ್ಷಿಯನ್ನು ಸಂಗ್ರಹಿಸಬೇಡಿ. ಅದು ಕೆಲವು ಉತ್ಪನ್ನಗಳಿಂದ ಉತ್ಪತ್ತಿಯಾಗುವ ಅನಿಲವಾಗಿದ್ದು ಅದು ಸೂಕ್ಷ್ಮವಾದ ಹಣ್ಣುಗಳು ಮತ್ತು ತರಕಾರಿಗಳು ಹೆಚ್ಚು ವೇಗವಾಗಿ ಹಣ್ಣಾಗಲು ಕಾರಣವಾಗಬಹುದು. ಯಾವುದೇ ಒಂದು ದ್ರಾಕ್ಷಿ ಸ್ವಲ್ಪ ಕೊಳೆಯಲು ಪ್ರಾರಂಭಿಸಿದರೆ ಸಾಕು, ನೀವು ಅದನ್ನು ತೆಗೆದು ಹಾಕಲು ಬಯಸುತ್ತೀರಿ, ಏಕೆಂದರೆ ಅದೊಂದು ಇಡೀ ಕಾಂಡದಲ್ಲಿರುವ ಇತರೆ ದ್ರಾಕ್ಷಿಗಳಿಗೂ ಸೋಂಕು ತರುತ್ತವೆ” ಎಂದು ಜೆಂಟೈಲ್ ಹೇಳುತ್ತಾರೆ. “ಈ ರೀತಿಯಲ್ಲಿ ಸಂಗ್ರಹಿಸಿಟ್ಟರೆ, ದ್ರಾಕ್ಷಿ ಹಣ್ಣು ಸುಮಾರು ಮೂರು ವಾರಗಳವರೆಗೆ ತಾಜಾವಾಗಿಯೇ ಉಳಿಯಬಹುದು” ಎಂದು ಅವರು ಹೇಳುತ್ತಾರೆ.
ನೀವು ಕೆಟ್ಟ ದ್ರಾಕ್ಷಿಯನ್ನು ತಿನ್ನಬಹುದೇ? ಅಚ್ಚು, ಸುಕ್ಕುಗಟ್ಟಿದ ಅಥವಾ ಒಸರುವ ದ್ರಾಕ್ಷಿಯನ್ನು ಕಾಂಪೋಸ್ಟ್ ರಾಶಿಯಲ್ಲಿ ಎಸೆಯಬೇಕು. ಅಚ್ಚು ಹಿಡಿದಿರುವ ದ್ರಾಕ್ಷಿಯನ್ನು ತಿನ್ನುವುದರಿಂದ ಉಸಿರಾಟದ ಸಮಸ್ಯೆಗಳು, ಜಠರಗರುಳಿನ ಸಮಸ್ಯೆಗಳು ಅಥವಾ ಅಲರ್ಜಿಯ ಪ್ರತಿಕ್ರಿಯೆಗಳನ್ನು ಪ್ರಚೋದಿಸಬಹುದು.