ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ ನಮಗನಿಸುವುದು ನಿದ್ರೆ ಮಾಡಬೇಕು ಎಂದು. ಅದು ಮಧ್ಯಾಹ್ನವೇ ಆಗಿರಬಹುದು ಅಥವಾ ರಾತ್ರಿಯ ಊಟವೇ ಆಗಿರಬಹುದು. ಯಾಕೆಂದರೆ ಹೊಟ್ಟೆ ಭಾರವಾದ ಕೂಡಲೇ ದೇಹದಲ್ಲಿ ಜಡತ್ವ ತುಂಬುವುದು. ಇದು ನಿದ್ರೆಗೆ ಜಾರುವಂತೆ ಮಾಡುವುದು. ಆದರೆ ಊಟವಾದ ತಕ್ಷಣವೇ ಮಲಗುವುದು ಸರಿಯಾದ ಕ್ರಮವಲ್ಲ ಮತ್ತು ಇದು ಆರೋಗ್ಯದ ಮೇಲೆ ಪರಿಣಾಮ ಕೂಡ ಬೀರುವುದು. ಅದೇ ರೀತಿಯಾಗಿ ಊಟವಾದ ಬಳಿಕ ನೀವು ಮಾಡಲೇಬಾರದ ಕೆಲವೊಂದು ಕೆಲಸಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಳ್ಳಿ.
ತಂಪಾದ ನೀರು ಕುಡಿಯಬೇಡಿ
ನಮ್ಮ ದೇಹದಲ್ಲಿ ಶೇ. 70ರಷ್ಟು ನೀರಿನಾಂಶವಿದೆ ಎಂದು ಹೇಳಲಾಗುತ್ತದೆ. ಇದರಿಂದ ನೀರು ನಮ್ಮ
ದೇಹಕ್ಕೆ ಅತ್ಯಗತ್ಯವಾಗಿರುವುದು. ಜೀರ್ಣಕ್ರಿಯೆಗೂ ನೀರು ತುಂಬಾ ಸಹಕಾರಿ. ಆದರೆ ಊಟವಾದ ಕೂಡಲೇ ತಂಪಾದ ನೀರು ಕುಡಿಯಬಾರದು. ಯಾಕೆಂದರೆ ತಂಪಾದ ನೀರು ಆಹಾರವನ್ನು ಅಂಟಿಕೊಳ್ಳುವಂತೆ ಮಾಡುವುದು ಮತ್ತು ಇದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಜೀರ್ಣಕ್ರಿಯೆ ಬೆಂಕಿ ಎಂದು ಭಾವಿಸಿದರೆ, ತಂಪು ನೀರು ಶಾಮಕದಂತೆ!
ನಿದ್ರಿಸುವುದು
ಮಧ್ಯಾಹ್ನ ಊಟ ಮಾಡಿದ ಬಳಿಕ ಸ್ವಲ್ಪ ನಿದ್ರೆ ಮಾಡಬೇಕು ಎಂದು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಊಟವಾದ ತಕ್ಷಣವೇ ಮಲಗಿದರೆ ಆಗ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು ಮತ್ತು ಆಹಾರವು ಜೀರ್ಣವಾಗದೆ ಹಾಗೆ ಇರುವುದು. ಇದರಿಂದ ನೀವು ನಿದ್ರೆಯಿಂದ ಎದ್ದ ಬಳಿಕವೂ ಹೊಟ್ಟೆ ಭಾರವಾದಂತೆ ಆಗುವುದು.
ಧೂಮಪಾನ
ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕೆಲವರಿಗೆ ಕೆಲವರಿಗೆ ಊಟವಾದ ಕೂಡಲೇ ಧಂ ಎಳೆಯಲೇ ಬೇಕು. ಇಲ್ಲದೆ ಇದ್ದರೆ ಅವರಿಗೆ ಸರಿಯಾಗಿ ಊಟ ಮಾಡಿದ ಹಾಗೆ ಆಗುವುದೇ ಇಲ್ಲ. ಊಟವಾದ ತಕ್ಷಣ ಧೂಮಪಾನ ಮಾಡುವುದು ನೀವು ಒಮ್ಮೆಲೇ ಹತ್ತು ಸಿಗರೇಟ್ ಸೇದಿದಂತೆ. ನೀವು ಇನ್ನು ಮುಂದೆ ಧೂಮಪಾನ ಮಾಡಲೇಬಾರದು.
ಸ್ನಾನ ಮಾಡಬೇಡಿ
ಊಟವಾದ ಬಳಿಕ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆಯು ವಿಳಂಬವಾಗುವುದು. ಹೊಟ್ಟೆಯ ಸುತ್ತಲಿನ ರಕ್ತವು ಜೀರ್ಣಕ್ರಿಯೆಗೆ ನೆರವಾಗುವ ಬದಲು ದೇಹದ ಬೇರೆ ಭಾಗಗಳಿಗೆ ತೆರಳುವುದು. ಇದರಿಂದ ಊಟವಾದ ಬಳಿಕ ಸ್ನಾನ ಮಾಡಬಾರದು. ನಾವು ಊಟ ಮಾಡುವ ವೇಳೆ ರಕ್ತವು ಹೊಟ್ಟೆಯ ಭಾಗಕ್ಕೆ ಹರಿಯಲು ಆರಂಭವಾಗುವುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು. ಆದರೆ ಊಟವಾದ ತಕ್ಷಣ ನಾವು ಸ್ನಾನ ಮಾಡಿದರೆ ಆಗ ಜೀರ್ಣಕ್ರಿಯೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವುದು. ಇದು ದೇಹದ ತಾಪಮಾನ ತಗ್ಗಿಸುವುದು. ರಕ್ತವು ಕೈ, ಕಾಲು ಚರ್ಮದ ಭಾಗಕ್ಕೆ ತೆರಳಿ ದೇಹದ ಉಷ್ಣತೆ ಕಾಪಾಡಿಕೊಳ್ಳಲು ನೆರವಾಗುವುದು. ಇದರಿಂದ ಊಟವಾದ ತಕ್ಷಣವೇ ಸ್ನಾನ ಮಾಡಲೇಬಾರದು.
ಹಣ್ಣುಗಳ ಸೇವನೆ
ಪ್ರತಿಯೊಂದು ಆಹಾರಕ್ಕೂ ಜೀರ್ಣಗೊಳ್ಳಲು ತನ್ನದೇ ಆಗಿರುವ ವೇಗವಿರುವುದು. ಹಣ್ಣುಗಳನ್ನು ಮೊದಲು ತಿಂದರೆ ಆಗ ಅದು ಬೇಗನೆ ಜೀರ್ಣವಾಗುವುದು. ಹಣ್ಣುಗಳನ್ನು ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಎರಡು ಗಂಟೆ ಬಳಿಕ ಸೇವಿಸಬೇಕು. ಊಟವಾದ ತಕ್ಷಣವೇ ನೀವು ಹಣ್ಣುಗಳನ್ನು ಸೇವಿಸಿದರೆ ಅದು ಸರಿಯಾಗಿ ಜೀರ್ಣವಾಗದು.
ಚಹಾ
ಭಾರತದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಜನಸಂಖ್ಯೆಗೆ ಚಾ ಅನ್ನುವುದು ಒಂದು ಚಟವಾಗಿ ಹೋಗಿದೆ. ಕೆಲವರು ಇದನ್ನು ಸಂಭ್ರಮಾಚರಿಸಲು ಕೂಡ ಕುಡಿಯುವರು. ಆದರೆ ಊಟವಾದ ಕೂಡಲೇ ಚಹಾ ಕುಡಿಯುವುದು ಸರಿಯಾದ ಕ್ರಮವೇ ಎನ್ನುವ ಪ್ರಶ್ನೆ ಬರುವುದು. ಚಾ ನಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಯಾಕೆಂದರೆ ಚಾ ನೈಸರ್ಗಿಕವಾಗಿ ಆಮ್ಲೀಯ ಗುಣ ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ತುಂಬಾ ನಿಧಾನಗೊಳಿಸುವುದು ಮತ್ತು ಇದರಿಂದಾಗಿ ಹೊಟ್ಟೆ ಉಬ್ಬರ ಬರಬಹುದು. ನೀವು ಪ್ರೋಟೀನ್ ಇರುವ ಆಹಾರ ತಿಂದರೆ ಆಗ ಪ್ರೋಟೀನ್ ನ್ನು ಇದು ಮತ್ತಷ್ಟು ಗಟ್ಟಿಗೊಳಿಸುವುದು ಮತ್ತು ಜೀರ್ಣವಾಗಲು ತುಂಬಾ ಕಷ್ಟವಾಗುವುದು.
ವ್ಯಾಯಾಮ
ನೀವು ವ್ಯಾಯಮ ಮಾಡುವ ಮೊದಲು ದೇಹಕ್ಕೆ ಆಹಾರ ಜೀರ್ಣಿಸಿಕೊಳ್ಳಲು ಸಮಯ ಬೇಕು. ಊಟವಾದ ತಕ್ಷಣವೇ ನೀವು ವ್ಯಾಯಾಮ ಮಾಡಿದರೆ ಆಗ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು. ಊಟವಾದ ತಕ್ಷಣವೇ ನೀವು ವ್ಯಾಯಾಮ ಮಾಡಿದರೆ ಆಗ ವಾಂತಿ, ಹೊಟ್ಟೆ ಕಟ್ಟಿದಂತೆ ಮತ್ತು ಬೇಧಿ ಉಂಟಾಗಬಹುದು.
ಊಟವಾದ ತಕ್ಷಣ ಓಡುವುದು!
ಊಟವಾದ ತಕ್ಷಣವೇ ಓಡುವುದು ಸೆಳೆತ ಮತ್ತು ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು. ಇದರಿಂದ ನಿಮ್ಮ ದೇಹದಲ್ಲಿ ಜಡತ್ವ ಉಂಟಾಗಬಹುದು.
ಬೆಲ್ಟ್ ಸಡಿಲಗೊಳಿಸುವುದು
ಊಟವಾದ ಕೂಡಲೇ ನೀವು ಬೆಲ್ಟ್ ನ್ನು ಸಡಿಲಗೊಳಿಸಿದರೆ ಆಗ ಕರುಳು ಸುತ್ತಿಕೊಳ್ಳುವ ಸಾಧ್ಯತೆಯಿದೆ. ಇದು ಕರುಳಿಗೆ ತುಂಬಾ ಕೆಟ್ಟದು. ನೀವು ಅದಾಗಲೇ ಅಗತ್ಯಕ್ಕಿಂತಲೂ ಹೆಚ್ಚು ಸೇವನೆ ಮಾಡಿದ್ದೀರಿ ಎನ್ನುವುದರ ಸೂಚನೆಯಾಗಿದೆ.
ಅತಿಯಾಗಿ ನೀರು ಕುಡಿಯುವುದು
ಊಟವಾದ ತಕ್ಷಣ ಅತಿಯಾಗಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ರಸದ ಮೇಲೆ ಪರಿಣಾಮ ಬೀರುವುದು ಮತ್ತು ಇನ್ಸುಲಿನ್ ಮಟ್ಟವನ್ನು ಅತಿಯಾಗಿ ಹೆಚ್ಚಿಸುವುದು.
ಊಟವಾದ ತಕ್ಷಣ ಹಲ್ಲುಜ್ಜಬೇಡಿ
ಬಾಯಿಯ ಆರೋಗ್ಯಕ್ಕೆ ಹಲ್ಲುಜ್ಜುವುದು ಅತೀ ಅನಿವಾರ್ಯವಾಗಿರುವುದು. ಆದರೆ ನೀವು ಊಟವಾದ ತಕ್ಷಣ ಹಲ್ಲುಜ್ಜಿದರೆ ಆಗ ಹಲ್ಲುಗಳಿಗೆ ಹಾನಿಯಾಗುವುದು. ದುರ್ಬಲ ಪರಿಸ್ಥಿತಿಯಲ್ಲಿ ನೀವು ಹಲ್ಲುಜ್ಜಿದರೆ ದಂತಕವಚಕ್ಕೆ ಹಾನಿ ಆಗುವುದು. ಪ್ರತೀ ಸಲ ಊಟ ಮಾಡಿದ ಬಳಿಕ ಬಾಯಿ ಮುಕ್ಕಳಿಸಿಕೊಳ್ಳಿ. ಆದರೆ ಒಂದು ಗಂಟೆ ಬಳಿಕ ಹಲ್ಲುಜ್ಜಿ.