ಕನ್ನಡ ಕಿರುತೆರೆಯ ಖ್ಯಾತ ನಟಿ, ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸದಾ ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವ ತನಿಷಾ ಇದೀಗ ಜಂಪ್ಸೂಟ್ ಧರಿಸಿ ತಮ್ಮ ಮುದ್ದಿನ ನಾಯಿಯೊಂದಿಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ರೆಡ್ ಕಲರ್ನಲ್ಲಿ ವೈಟ್ ಸ್ಟ್ರೈಪ್ ಇರೋ ಡ್ರೆಸ್ನ್ನು ತನಿಷಾ ಧರಿಸಿದ್ದಾರೆ. ಇದು ಹೈ ಸ್ಲಿಟ್ ಡ್ರೆಸ್ ಆಗಿದ್ದು ತನಿಷಾ ತೊಡೆ ಕಾಣುವಂತೆ ಬೋಲ್ಡ್ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ.
ಜೊತೆಗೆ ತನಿಷಾ ತಮ್ಮ ಮುದ್ದಾದ ನಾಯಿ ಮರಿಯನ್ನು ಹಿಡಿದುಕೊಂಡು ಫೋಟೋಸ್ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಟೋಸ್ ಶೇರ್ ಮಾಡಿದ ತನಿಷಾ ಇದಕ್ಕೆ ‘ನಾನ್ ಏನ್ ಮಾಡ್ಲಿ ಸ್ವಾಮಿ, ನಮ್ ಹುಡುಗಿ ನಾಯಿ ಪ್ರೇಮಿ’ ಅನ್ನೋ ಸಾಂಗ್ ಸಹ ಹಾಕಿಕೊಂಡಿದ್ದಾರೆ.
ನಟಿ ಬಿಗ್ಬಾಸ್ 10 ನಂತರ ಫುಲ್ ಬ್ಯುಸಿಯಾಗಿದ್ದಾರೆ. ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ನಂತರವೂ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಅವದು ಹೆಚ್ಚಿನ ಇವೆಂಟ್ಗಳಲ್ಲಿಯೂ ನಟಿ ಭಾಗಿಯಾಗುತ್ತಿರುತ್ತಾರೆ.
ತನಿಷಾ ಕುಪ್ಪಂಡ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್. ನಟಿ ಬಿಗ್ಬಾಸ್ 10ರಲ್ಲಿ ಭಾಗವಹಿಸಿ ಎಲ್ಲರಿಂದ ಮೆಚ್ಚುಗೆ ಪಡೆದರು. ನಟಿ ಇತ್ತೀಚೆಗೆ ಚಂದದ ಫೋಟೋಸ್ ಅಪ್ಲೋಡ್ ಮಾಡಿದ್ದಾರೆ.
ತನಿಷಾ ಕುಪ್ಪಂಡ ಅವರು ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸೀರಿಯಲ್ನಲ್ಲಿ ಅವರ ಅಭಿನಯಕ್ಕೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿತ್ತು. ನಟಿ ಬಿಗ್ಬಾಸ್ ಮೂಲಕವೂ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡರು.
ಬಿಗ್ ಬಾಸ್ ಮೂಲಕ ರಾಜ್ಯದ ಜನರಿಗೆ ಹೆಚ್ಚು ಪರಿಚಿತರಾದವರು ನಟಿ ತನಿಷಾ.ಈಕೆಗಾಗಿ ಅವರಿಗಾಗಿ ಬೆಂಕಿ ಬಂತು ಬೆಂಕಿ ಎನ್ನುವ ಹಾಡನ್ನು ಸಹ ಬಿಡುಗಡೆ ಮಾಡಲಾಗಿತ್ತು. ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದರು.
ಇದೀಗ ಬಿಗ್ ಬಾಸ್ ನಿಂದ ಹೊರ ಬಂದ ಮೇಲೂ ಸಹ ತನಿಷಾ ಹವಾ ಕಡಿಮೆಯಾಗಿಲ್ಲ. ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ ಜನರ ಜೊತೆ ಮತ್ತಷ್ಟು ಕನೆಕ್ಟ್ ಆಗಲು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.