ಹಾವೇರಿ:- ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಹಾವೇರಿಯಲ್ಲಿ ಪರಿಸರ ಸ್ನೇಹಿ ಮತಗಟ್ಟೆ ನಿರ್ಮಾಣ ಮಾಡಿದೆ.
Lokasabha Election: ಬಿದರಕುಂದಿ ಗ್ರಾಮದಲ್ಲಿ ಕೈಕೊಟ್ಟ ಇವಿಎಂ ಮಷಿನ್.. ಕ್ಯೂ ನಲ್ಲಿ ನಿಂತು ಸುಸ್ತಾದ ಜನ..!
ಹಾವೇರಿಯ ವಿದ್ಯಾನಗರದಲ್ಲಿ ಹಸಿರು ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು, ಮತದಾರರನ್ನ ಸೆಳೆಯಲು ಹಸಿರು ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ತೆಂಗಿನ ಗರಿ, ಮಾವಿನ ಎಲೆಗಳಿಂದ ಗ್ರಾಮೀಣ ಸೊಗಡಿನ ಮತಗಟ್ಟೆ ನಿರ್ಮಿಸಲಾಗಿದೆ. ಹೀಗಾಗಿ ಹಸಿರು ಮತಗಟ್ಟೆ ಮತದಾರರನ್ನ ಸೆಳೆಯುತ್ತಿದೆ. ಬಿಳಿ ಪಂಚೆ, ಪೇಟಾ, ಸಾಂಪ್ರದಾಯಿಕ ಉಡುಗೆ ತೊಟ್ಟು ಮತದಾರರಿಗೆ ಸಿಬ್ಬಂದಿಗಳಿಂದ ಸ್ವಾಗತ ಮಾಡಲಾಗಿದೆ. ಸೆಲ್ಪಿ ತೆಗೆದುಕೊಳ್ಳಲು ಹಸಿರು ಮತಗಟ್ಟೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರ, ಸಹಾಯವಾಣಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ.