ಬೆಂಗಳೂರು:- ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡ್ನ್ಯಾಪ್ ಕೇಸ್ನಲ್ಲಿ ಬಂಧನವಾಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಹಾಜರುಪಡಿಸಿದರು. ಈ ವೇಳೆ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಸಾಗುತ್ತಿದ್ದದ್ದು ಕಂಡುಬಂದಿದೆ. ಯಾವುದೇ ಶುಭ ಕಾರ್ಯವಿದ್ದರೂ ಸಹ ರೇವಣ್ಣ ಅವರ ಕೈಯಲ್ಲಿ ನಿಂಬೆ ಹಣ್ಣು ಇದ್ದೇ ಇರುತ್ತೇ. ರೇವಣ್ಣ ಅವರು ಕೈಯಲ್ಲಿ ಸದಾ ನಿಂಬೆ ಹಣ್ಣು ಇರುತ್ತದೆ ಎಂಬುವುದು ಎಲ್ಲರಿಗೂ ತಿಳಿದ ವಿಷಯವೇ.
Breaking: ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ.. ಪೊಲೀಸರಿಂದ ತನಿಖೆ ಚುರುಕು!
ಕೈ ಯಲ್ಲಿ ನಿಂಬೆ ಹಣ್ಣು ಯಾಕೆ ಸರ್ ಎಂದು ಹಲವರು ಹಾಸ್ಯ ಮಾಡಿದರೂ ಅದನ್ನ ನಗುತ್ತಲೇ ರೇವಣ್ಣ ಅವರು ಸ್ವೀಕರಿಸುತ್ತಿದ್ದರು, ಇದೀಗ ನ್ಯಾಯಧೀಶರ ಮುಂದೆ ಹಾಜರಾದಗಾ ರೇವಣ್ಣ ಅವರ ಕೈಯಲ್ಲಿ ನಿಂಬೆ ಹಣ್ಣು ಇರುವುದು ಕಂಡು ಬಂದಿದೆ.
ಹಾಸನ ಹಾಲಿ ಸಂಸದರಾದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಪ್ರಕರಣ ಸಂಬಂಧಪಟ್ಟಂತೆ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್ನಲ್ಲಿ ಬಂಧನವಾಗಿರುವ ಮಾಜಿ ಸಚಿವ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ರೇವಣ್ಣ ಅವರನ್ನು ಭಾನುವಾರ ಸಂಜೆ ನ್ಯಾಯಾಧೀಶರ ಮುಂದೆ ಎಸ್ಐಟಿ ಹಾಜರುಪಡಿಸಿತ್ತು. ಈ ವೇಳೆಯೂ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಸಾಗುತ್ತಿದ್ದದ್ದು ಕಂಡುಬಂದಿದ್ದು, ಸದ್ಯ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಸಂಕಷ್ಟ ಬಂದಾಗ ಹೋಮ-ಹವನ, ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳ ಮೊರೆ ಹೋಗುವ ರೇವಣ್ಣ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಓಡಾಡುತ್ತಿದ್ದರು. ಆದರೆ, ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ನಲ್ಲಿ ಬಂಧನವಾದ ನಂತರ ಅವರಿಗೆ ಜ್ಯೋತಿಷ್ಯ, ನಿಂಬೆಹಣ್ಣು ಕೂಡ ಕೈಹಿಡಿಯಲಿಲ್ಲ ಎಂದು ಸಾರ್ವಜನಿಕರು ವ್ಯಂಗ್ಯವಾಡುತ್ತಿದ್ದಾರೆ.