ಕಿರುತೆರೆ ನಟಿ ನಮ್ರತಾ ಗೌಡ, ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.
ನಮೃತಾ ಆಗಾಗ ತಮ್ಮ ಹೊಸ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಂತೆಯೇ ಇತ್ತೀಚೆಗೆ ನಟಿ ಬ್ಲೂ ಕಲರ್ ರೇಷ್ಮೆ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ನಮೃತಾ ಸಿಲ್ವರ್ ಲೈನ್ಸ್ ಇರುವ ನೀಲಿ ಬಣ್ಣದ ರೇಷ್ಮೆ ಸೀರೆಯನ್ನು ಇದಕ್ಕೆ ಸರಳವಾದ ಆಭರಣಗಳನ್ನು ಧರಿಸಿ ಸುಂದರವಾಗಿ ಕಾಣುತ್ತಿದ್ದಾರೆ. ಫ್ಯಾನ್ಸ್ ಈ ಫೋಟೋ ನೋಡಿ ನಟಿಯ ಸೌಂದರ್ಯವನ್ನು ಹೊಗಳಿದ್ದಾರೆ.
‘ಕೃಷ್ಣ ರುಕ್ಮಿಣಿ’ ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದ ನಮೃತಾ ಗೌಡ ಆ ಬಳಿಕ ಇದಾದ ಬಳಿಕ ‘ಪುಟ್ಟ ಗೌರಿ’ ಮದುವೆ ಧಾರಾವಾಹಿಯಲ್ಲಿ ಹಿಮ ಪಾತ್ರದಲ್ಲಿ ಮಿಂಚಿದ್ದರು. ಈ ಸೀರಿಯಲ್ನಲ್ಲಿ ಆಕೆಯ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟನೆಯಿಂದ ಮನೆ ಮಾತಾಗಿದ್ದರು.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿರುತೆರೆ, ಯೂಟ್ಯೂಬ್ ಚಾನೆಲ್ನಲ್ಲಿ ಸದ್ದು ಮಾಡ್ತಿದ್ದ ನಮ್ರತಾ ಗೌಡ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗ್ತಿದ್ದಾರೆ.
ನಾಗಿಣಿ 2, ಬಿಗ್ ಬಾಸ್ ಸೀಸನ್ 10 ಶೋ ಮೂಲಕ ಗಮನ ಸೆಳೆದ ನಮ್ರತಾ ಗೌಡ ಇತ್ತೀಚಿಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ದುಬಾರಿ ಕಾರು ಖರೀದಿಸುವ ಮೂಲಕ ನಟಿ ಸಂಭ್ರಮಿಸಿದ್ದಾರೆ. ಇದರ ಜೊತೆಗೆ ನಟಿ ಜಾಹೀರಾತುಗಳಲ್ಲಿ ತೊಡಗಿಕೊಂಡಿದ್ದಾರೆ.