ನನ್ನರಸಿ ರಾಧೆ ಸೀರಿಯಲ್ನಲ್ಲಿ ಇಂಚರಾ ಪಾತ್ರದಲ್ಲಿ ನಟಿಸಿದ ನಟಿ ಕೌಸ್ತುಭ ಮಣಿ ಹಸೆಮಣೆ ಏರಿದ್ದಾರೆ.
ಸಿದ್ಧಾಂತ್ ಸತೀಶ್ ಎಂಬುವರನ್ನ ಕೌಸ್ತುಭ ಮಣಿ ಏ.26ರಂದು ಮದುವೆಯಾಗಿದ್ದಾರೆ.
ಕೌಸ್ತುಭ ಮಣಿ ಹಾಗೂ ಸಿದ್ದಾಂತ್ ಸತೀಶ್ ವಿವಾಹ ಮಹೋತ್ಸವ ಅದ್ಧೂರಿಯಾಗಿ, ಅಷ್ಟೇ ಸಂಪ್ರದಾಯ ಬದ್ಧವಾಗಿ ನಡೆದಿದೆ.
ಕುಟುಂಬಸ್ಥರು, ಆತ್ಮೀಯರ ಸಮ್ಮುಖದಲ್ಲಿ ಸಿದ್ಧಾಂತ್ ಸತೀಶ್ ಹಾಗೂ ಕೌಸ್ತುಭ ಮಣಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಹೆಲಿಕಾಪ್ಟರ್ ನಲ್ಲಿ ಕುಳಿತು ಭರ್ಜರಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರು ಬೋಲ್ಡ್ ಲಿಪ್ ಲಾಕ್ ಮಾಡುವ ಮೂಲಕ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ನೂತನ ಜೋಡಿಯ ಲಿಪ್ ಲಾಕ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟಿ ಕೌಸ್ತುಭ ಮಣಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನನ್ನರಸಿ ರಾಧೆ’ ಸೀರಿಯಲ್ನಲ್ಲಿ ನಾಯಕಿ ಇಂಚರಾ ಆಗಿ ಅಭಿನಯಿಸುತ್ತಿದ್ದರು. ‘ನನ್ನರಸಿ ರಾಧೆ’ ಧಾರಾವಾಹಿ ಮೂಲಕ ಕೌಸ್ತುಭ ಮಣಿ ಹೆಚ್ಚಿನ ಜನಪ್ರಿಯತೆ ಪಡೆದ್ರು. ‘ನನ್ನರಸಿ ರಾಧೆ’ ಮುಕ್ತಾಯಗೊಂಡಿದ್ದು, ನಟಿ ಕೌಸ್ತುಭ ಮಣಿ ಇದೀಗ ಮದುವೆಯಾಗಿ ಸೆಟಲ್ ಆಗಿದ್ದಾರೆ.