ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿಕೆ ಸುರೇಶ್ ಗೆ ಮತ ಹಾಕುವಂತೆ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಧಮ್ಕಿ ಹಾಕಿದ ಆರೋಪದ ಕುರಿತಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಜನರ ಗಮನ ಬೇರೆ ಕಡೆ ಸೆಳೆಯಲು ಬಿಜೆಪಿ ಜೆಡಿಎಸ್ ಈ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ. ಮಾತನಾಡಿದ ಅವರು,
ನಾವು ಬೆಂಗಳೂರು ನಗರದ ಎಲ್ಲಾ ಜನರಿಗೂ ಈ ಕಷ್ಟ ಕಾಲದಲ್ಲಿ ನೀರು ಕೊಡ್ತಿದ್ದೀವಿ. ಇಂತಹ ಸಂದರ್ಭದಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಆಡಿರುವ ಮಾತು, ಮುತ್ತರತ್ನಗಳನ್ನೆಲ್ಲಾ ಬೇರೆ ಕಡೆಗೆ ಡೈವರ್ಟ್ ಮಾಡಲು ಈ ಆರೋಪ ಮಾಡಿದ್ದಾರೆ ಎಂದರು.
Rama Navami 2024: ರಾಮ ನವಮಿ ಯಾವಾಗ.? ಪೂಜಾ ವಿಧಿ ವಿಧಾನ, ಮಹತ್ವ ತಿಳಿಯಿರಿ
ಎಚ್ಡಿ ಕುಮಾರಸ್ವಾಮಿ ಅವರಿಗೆ ಗ್ಯಾರಂಟಿ ಟೀಕೆಯ ಸಂದರ್ಭದಲ್ಲಿ ಹೆಣ್ಮಕ್ಕಳ ಬಗ್ಗೆ ಮಾತನಾಡೋಕೆ ಹೇಳಿದೋರು ಯಾರು? ಜನರಿಗೆ ಆಗಿರುವ ಮಾನಸಿಕ ನೋವು ತೆಗೆದುಹಾಕಲು ಆಗಲ್ಲ. ಇದು ರಾಜ್ಯದ ವಿಚಾರ, ಹೆಣ್ಮಕ್ಕಳ ಸ್ವಾಭಿಮಾನದ ವಿಚಾರವಾಗಿದೆ. ಬಿಜೆಪಿ ದಿನೇ ದಿನೆ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.