ಬೆಂಗಳೂರು:- ಏರ್ಪೋರ್ಟ್ ಕಡೆ ಸಂಚರಿಸೋ ಪ್ರಯಾಣಿಕರೇ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಇಂದಿನಿಂದ ಹೆಬ್ಬಾಳ ಕಡೆ ಹೋಗೋದಿದ್ರೆ ಅತ್ತ ತಿರುಗಲೇ ಬೇಡಿ.
Aadhar Update: ಆಧಾರ್ ಕಾರ್ಡ್ ಅಪ್ಡೇಟ್ ಗೆ ಬೇಕಾಗುವ ದಾಖಲೆ ಯಾವುದು!? ಅದರ ಸಲ್ಲಿಕೆ ಹೇಗೆ!?, ಇಲ್ಲಿದೆ ಡೀಟೈಲ್ಸ್!
ಹೌದು, ಹೆಬ್ಬಾಳ ಫ್ಲೈ ಒವರ್ನಲ್ಲಿ ಏಪ್ರಿಲ್ 17 ರಿಂದ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಯನ್ನು ಬಿಡಿಎ ಚುರುಕುಗೊಳಿಸಿದ್ದು, ಎರಡು ಹೊಸ ಟ್ರ್ಯಾಕ್ಗಳನ್ನು ಸೇರಿಸಲಿದೆ. ಕಾಮಗಾರಿ ಹಿನ್ನೆಲೆ ಕೆಆರ್ ಪುರ ಲೂಪ್ ಸೇತುವೆ ಮೇಲೆ ವಾಹನ ಸಂಚಾರವನ್ನು ಸುಮಾರು 4 ತಿಂಗಳ ಕಾಲ ನಿಷೇಧಿಸಲಾಗಿದೆ.
ಕೆಆರ್ ಪುರಂ, ನಾಗಾವರ ಕಡೆಯಿಂದ ಬಂದು ಮೇಖ್ರಿ ಸರ್ಕಲ್ಗೆ ಹೋಗುವ ಅಪ್ ರ್ಯಾಂಪ್ ಮೇಲೆ ದ್ವಿಚಕ್ರ ವಾಹನ ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಸುಗಮ ಸಂಚಾರಕ್ಕಾಗಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ನಾಗವಾರ (ಔಟರ್ ರಿಂಗ್ ರಸ್ತೆ) ಕಡೆಯಿಂದ ಬೆಂಗಳೂರಿಗೆ ಮೇಖ್ರಿ ವೃತ್ತದ ಮೂಲಕ ಬರುತ್ತಿದ್ದ ವಾಹನಗಳು ಹೆಬ್ಬಾಳ ಸರ್ಕಲ್ನಲ್ಲಿ ಫ್ಲೈ ಓವರ್ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೆಹಳ್ಳಿ ಜಂಕ್ಷನ್ ಬಳಿ ಯೂ ಟರ್ನ್ ಪಡೆದು ಸರ್ವಿಸ್ ರಸ್ತೆಯ ಮೂಲಕ ಹೆಬ್ಬಾಳ ಫ್ಲೈ ಓವರ್ನ ರ್ಯಾಂಪ್ ಮೂಲಕ ನಗರದ ಕಡೆಗೆ ಚಲಿಸಬಹುದು.
ಇನ್ನು, ಕೆಆರ್ಪುರ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಕೋರಿದ್ದಾರೆ. ಐಒಸಿ-ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ, ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರದೊಳಗೆ ಪ್ರವೇಶಿಸಬೇಕು. ಹೆಗಡೆನಗರ-ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿಕೆವಿಕೆ-ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದಾಗಿದೆ
ಇನ್ನು, ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈಓವರ್ ಕೆಳಗಡೆ ನೇರವಾಗಿ ಬಿಇಎಲ್ ಸರ್ಕಲ್ ತಲುಪಿ ಎಡ ತಿರುವು ಪಡೆದು ಸದಾಶಿವನಗರ ಜಂಕ್ಷನ್ನಲ್ಲಿ ಬಲತಿರುವು ಪಡೆದು ಐಐಎಸ್ಸಿ ಮೂಲಕ ಚಲಿಸಬಹುದು. ಕೆಆರ್ಪುರಂ, ಹೆಣ್ಣೂರು, ಎಚ್.ಆರ್ಬಿಆರ್ ಲೇಔಟ್, ಕೆಜಿ ಹಳ್ಳಿ, ಬಾಣಸವಾಡಿ ಕಡೆಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆ ಹೋಗುವ ವಾಹನಗಳು ಹೆಣ್ಣೂರು – ಬಾಗಲೂರು ರಸ್ತೆ ಬಳಸಿ ಏರ್ಪೋರ್ಟ್ಗೆ ತೆರಳಬಹುದು.