ಕೋಲಾರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಕೋಲಾರ ಸಂಸದ ಎಸ್.ಮುನಿಸ್ವಾಮಿ, ಮಹಿಳೆಯರ ಬಗ್ಗೆ ಗೌರವ ಇರುವುದರಿಂದಲೇ ತೆನೆ ಹೊತ್ತ ಮಹಿಳೆ ಚಿಹ್ನೆ ಇರಿಸಿಕೊಂಡಿದ್ದಾರೆ. ಹೀಗಿರುವಾಗ ಡಿಕೆಶಿ ಹಾಗೂ ಸಿದ್ದರಾಮಯ್ಯ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಟಾಂಗ್ ನೀಡಿದ್ರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾಂಗ್ರೆಸ್ ಮೈತ್ರಿ ಇದ್ದಾಗ ಕುಮಾರಣ್ಣನ ಮಗನನ್ನ ಸೋಲಿಸಲು ಕಾಂಗ್ರೆಸ್ ನವವರು ಹುನ್ನಾರ ಮಾಡಿದ್ರು. ರಾಷ್ಟ್ರಪತಿ ದ್ರೌಪತಿ ಮುರ್ಮು, ಕಂಗನಾ, ನಮ್ಮ ಅಭ್ಯರ್ಥಿ ಹೇಮಮಾಲಿನಿ ಕುರಿತು ಕಾಂಗ್ರೆಸ್ಸಿಗರು ಮಾತನಾಡಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಧಾನಸೌಧದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದೆಲ್ಲಾ ಇರುವಾಗ ಹೀಗೆ ವೋಟ್ ಬ್ಯಾಂಕ್ ಗೋಸ್ಕರ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಈ ಬಾರಿ ಚುನಾವಣೆಯಲ್ಲಿ ಲೀಡ್ ಕೊಡಲಿಲ್ಲ. ಅಂದರೆ ಸಚಿವ ಸ್ಥಾನದಿಂದ ತೆಗೆಯಲಾಗುವುದು ಎಂಬ ಕೈಗಾರಿಕಾ ಸಚಿವ ಶರಣಬಸಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಹೇಳಿದ್ದಾರೆ. ಲೀಡ್ ಬಂದಿಲ್ಲ ಎಂದರೆ ಸಿಎಂ ಸ್ಥಾನದಿಂದ ವಾಪಸ್ ಪಡೆಯುತ್ತಾರೆ ಎಂದು,
ಡಿಕೆಶಿ ಅವರು ಪೆನ್ನು ಪೇಪರ್ ಕೊಡಿ ಸಿಎಂ ಆಗ್ತೀನಿ ಎಂದರು ಲೋಡ್ ಲೋಡ್ ಪೆನ್ನು ಪೇಪರ್ ಕೊಟ್ಟರು ಸಿಎಂ ಆಗುವ ಲಕ್ಷಣಗಳು ಕಾಣಿಸ್ತಿಲ್ಲ. ಈಗ ಅವರದ್ದೇ ಮಂತ್ರಿಗಳನ್ನ ಬ್ಲಾಕ್ ಮೇಲ್ ಮಾಡುತ್ತಿದ್ದು, ಈ ಮೂಲಕ ಹಣದ ಹೊಳೆ ಹರಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ಸಿಗೆ ಸೋಲು ಖಚಿತವಾಗಿದೆ. ಹೀಗಾಗಿ 16 ಸಚಿವರು ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ರು.