ಧಾರವಾಡ: ದಿಂಗಾಲೇಶ್ವರ ಶ್ರೀಗಳ ಮನವೊಲಿಕೆ ಸಾಧ್ಯವಾಗಿಲ್ಲ, ಹೀಗಾಗಿ ಪ್ರಹ್ಲಾದ್ ಜೋಶಿ ಹಾಗೂ ದಿಂಗಾಲೇಶ್ವರ ಶ್ರೀಗಳು ಅಖಾಡದಲ್ಲಿ ಮುಖಾಮುಖಿಯಾಗಲೇಬೇಕಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ನಾನು ಬೇರೆ ಜಿಲ್ಲೆಯಲ್ಲಿ ಚುನಾವಣೆ ನಿಲ್ಲುತ್ತಿದ್ದು, ಅಲ್ಲಿನ ಕೆಲಸಗಳಲ್ಲಿದ್ದೇನೆ. ದಿಂಗಾಲೇಶ್ವರ ಶ್ರೀ ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ನಿಮ್ಮ ಮನೆಯಲ್ಲಿ ಇರುವೆಗಳ ಕಾಟವೇ.? ಸುಲಭವಾಗಿ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಒಮ್ಮೆ ಶ್ರೀಗಳ ಜೊತೆ ಮಾತನಾಡಿದೆ. ನನ್ನ ನಿಲುವು ಅಚಲ ಅಂತ ಅವರು ಹೇಳಿದ್ದಾರೆ. ಹೀಗಾಗಿ, ಜೋಶಿ ಅವರು ಚುನಾವಣೆಯಲ್ಲಿ ಶ್ರೀಗಳ ಮುಖಮುಖಿಯೊಂದೆ ಬಾಕಿ ಎಂದರು. ಪ್ರಹ್ಲಾದ್ ಜೋಶಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಧಾರವಾಡದಲ್ಲಿ ಸತತವಾಗಿ ಜೋಶಿ ಗೆದ್ದು ಬರ್ತಿದ್ದಾರೆ. ಈ ಬಾರಿ ಬಿಜೆಪಿ ಜೆಡಿಎಸ್ ಅಲೈನ್ಸ್ ಆಗಿದೆ. ರಾಜ್ಯದಲ್ಲಿ ಎಲ್ಲ 28 ಸ್ಥಾನ ಗೆಲ್ಲುತ್ತೇವೆ. ನರೇಂದ್ರ ಮೋದಿ ಆಡಳಿತ ನೋಡಿ ಮತದಾರರು ಮತ ಹಾಕ್ತಾರೆ ಎಂದು ಹೇಳಿದರು.