ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2024ರ 25ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿದೆ.
ಪಂದ್ಯವು ಆರ್ಸಿಬಿ ಮತ್ತು ಮುಂಬೈ ಎರಡೂ ತಂಡಗಳಿಗೆ ಮಹತ್ವದ್ದಾಗಿದ್ದು, ಆರ್ಸಿಬಿ ಗೆಲುವಿನ ಲಯಕ್ಕೆ ಮರಳಬೇಕಿದ್ದು, ಮುಂಬೈ ಗೆಲುವಿನ ಲಯ ಮುಂದುವರೆಸಬೇಕಿದೆ.
ಕೈ ಕೊಟ್ಟ ಲಕ್, ಕೋಟಿ-ಕೋಟಿ ಎಣಿಸಿ ದಿವಾಳಿಯಾದ ಭಾರತೀಯ ಉದ್ಯಮಿಗಳಿವರು!
ಈಗಾಗಲೇ ಐಪಿಎಲ್ 2024ರ 17ನೇ ಸೀಸನ್ ನಲ್ಲಿ ಆರ್ಸಿಬಿ ತಂಡವು ಸತತ ಸೋಲಿನಿಂದ ಕಂಗೆಟ್ಟಿದೆ. ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತಿದ್ದು, ಕೇವಲ 1 ಪಂದ್ಯ ಮಾತ್ರ ಗೆದ್ದಿದೆ. ಹೀಗಾಗಿ ತಂಡ ಪ್ಲೇಆಫ್ ಹಂತಕ್ಕೆ ತಲುಪಲು ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಈ ಪಂದ್ಯ ಅದಕ್ಕೆ ಮುನ್ನುಡಿಯಾಗಲಿದೆಯೇ ಎಂದು ನೋಡಬೇಕಿದೆ.
ಈಗಾಗಲೇ ಆರ್ಸಿಬಿ ಕಳೆದ 3 ಪಂದ್ಯಗಳಿಂದ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡುತ್ತಿದ್ದು, ಈ ಪಂದ್ಯದಲ್ಲಿಯೂ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ. ಅಲ್ಲದೇ ಈ ಬಾರಿ ದೊಡ್ಡಮಟ್ಟದಲ್ಲಿ ಬದಲಾವಣೆ ಮಾಡುವ ಸೂಚನೆ ದೊರಕಿದ್ದು, ತಂಡ್ಕಕೆ ಮೇಜರ್ ಸರ್ಜರಿ ಆಗದಿದ್ದಲ್ಲಿ ಸೋಲಿನ ಸುಳಿಯಿಂದ ಹೊರಬರುವುದು ಕಷ್ಟಕರ ಎನ್ನಲಾಗುತ್ತಿದೆ
ಇನ್ನು, RCB ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ ಮೇಲೆ ಅತಿಯಾದ ಅವಲಂಬನೆ ಇದೆ. ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಕ್ಯಾಮರೂನ್ ಗ್ರೀನ್ ಅವರ ಬ್ಯಾಟ್ನಿಂದ ರನ್ ಹರಿದುಬರುತ್ತಿಲ್ಲ. ಮ್ಯಾಕ್ಸ್ವೆಲ್ ಮೊದಲ ಐದು ಪಂದ್ಯಗಳಲ್ಲಿ 2 ಬಾರಿ ಡಕೌಟ್ ಆಗಿದ್ದಾರೆ. ಇತ್ತ ಬೌಲಿಂಗ್ ನಲ್ಲಿಯೂ ಅಲ್ಝಾರಿ ಜೋಸೆಫ್ ಬದಲಿಗೆ ರೀಸ್ ಟೋಪ್ಲೆಗೆ ಅವಕಾಶ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ
ಹೀಗಾಗಿ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಕೊನೆಗೂ ಲಾಕಿ ಫರ್ಗುಸನ್ ಮತ್ತು ವಿಲ್ ಜಾಕ್ಸ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಳವಾಗಿದೆ. ಅಲ್ಲದೇ ತಂಡದಲ್ಲಿ ಪ್ರಮುಖ ಸ್ಪಿನ್ನರ್ ಇಲ್ಲದಿರುವುದು ದೊಡ್ಡ ಹಿನ್ನಡೆಯಾಗಿದ್ದು, ಕರಣ್ ಶರ್ಮಾ ಅವರಿಗೆ ಚಾನ್ಸ್ ಸಿಕ್ಕರೂ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.
ಹೀಗಾಗಿ ಗೆಲುವಿನ ಟ್ರ್ಯಾಕ್ಗೆ ಮರಳಿರುವ ಮುಂಬೈ ವಿರುದ್ಧ ಕ್ಯಾಮರೂನ್ ಅವರನ್ನು ತಂಡದಿಂದ ಕೈಬಿಡಬಹುದಾಗಿದ್ದು, ಅವರ ಬದಲಿಗೆ ವಿಲ್ ಜ್ಯಾಕ್ಸ್ ಅವರಿಗೆ ಅವಕಾಶ ನೀಡಬಹುದಾಗಿದೆ. ವಿಲ್ ಜ್ಯಾಕ್ಸ್ SA 20 ಲೀಗ್ ನಲ್ಲಿ ಮುಂಬೈ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೇ ವಿಲ್ ಜ್ಯಾಕ್ಸ್ ಉತ್ತಮ ಆಲ್ರೌಂಡರ್ ಸಹ ಆಗಿದ್ದು, ಅವರ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ.