ಬೆಂಗಳೂರು: ಗ್ರಾಹಕರಿಗೆ ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ ಏನಾಪ್ಪಾ ಅಂದ್ರೆ ಗಗನಕ್ಕೇರಿದ್ದ ಅಕ್ಕಿದರ ಸ್ವಲ್ಪ ಇಳಿಕೆ ಕಂಡಿದೆ. ಹೋಟೆಲ್ ಮತ್ತಿತರ ಉದ್ದೇಶಗಳ ಬಳಕೆದಾರರಿಗೆ ತುಸು ಸಮಾಧಾನ ತಂದಿದೆ. ಸ್ಟೀಮ್ ರೈಸ್ ಅಕ್ಕಿದರ ಕಡಿಮೆಯಾಗಿದೆ. ಬೇಡಿಕೆಯ ರಾ ರೈಸ್ ದರ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ.
ಬೇಸಿಗೆ ಬೆಳೆ ಬಂದಿರುವುದರಿಂದ ಅಕ್ಕಿದರ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದ್ದು. ಸ್ಟೀಮ್ ರೈಸ್ ದರ ಕಡಿಮೆಯಾದರೂ ಅದನ್ನು ಎಲ್ಲರೂ ಬಳಸುವುದಿಲ್ಲ. ಆದರೆ, ಇದು ತಾತ್ಕಾಲಿಕ ಇಳಿಕೆ. ನೆರೆಯ ರಾಜ್ಯಗಳಿಂದ ಹೊಸ ಭತ್ತದ ಬೆಳೆ ಬಂದಿದೆ. ಇದರ ಜತೆಗೆ, ಭಾರತ್ ಅಕ್ಕಿಯ ಪ್ರಭಾವ ಕೂಡ ಅಕ್ಕಿಯ ಬೆಲೆ ಇಳಿಕೆಗೆ ಕಾರಣವಾಗಿದೆ.
Karnataka Weather Update: ಏಪ್ರಿಲ್ನಿಂದ ಜೂನ್ ವರೆಗೆ ಮತ್ತಷ್ಟು ತಾಪಮಾನ ಏರಿಕೆ: ಯಾವ್ಯಾವ ರಾಜ್ಯಗಳಿಗೆ ಆತಂಕ?
ಈ ನಡುವೆ ಚಿಲ್ಲರೆ ಮಾರಾಟಗಾರರು ಬೆಲೆ ಹೆಚ್ಚಿರುವಾಗ ಅಕ್ಕಿ ಖರೀದಿಸಿ ತಂದಿರುತ್ತಾರೆ. ಅಂತಹವರು ಹಳೆಯ ದರಕ್ಕೇ ಮಾರುತ್ತಾರೆ. ಆದರೆ, ಸ್ಟೀಮ್ ಅಕ್ಕಿ 8-10 ರೂ.ವರೆಗೆ ಇಳಿಕೆಯಾಗಿದೆ. ಆದರೆ ‘ರಾ ರೈಸ್’ ಬೆಲೆ ಯಥಾಸ್ಥಿತಿ ಇದೆ.
ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಹೊಸ ಭತ್ತ ಬಂದಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗಿದ್ದು, ಭಾರತ್ ರೈಸ್ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಅಲ್ಲದೆ, ಅಕ್ಕಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. ಇವೆಲ್ಲ ಕಾರಣಗಳಿಂದ ಅಕ್ಕಿ ದರ ಕೊಂಚ ಕಡಿಮೆಯಾಗಿದೆ.
ಸ್ಟೀಮ್ ರೈಸ್ ದರ ಕೆಜಿಗೆ 8 ರೂಪಾಯಿವರೆಗೆ ಕಡಿಮೆಯಾಗಿದೆ. ಕಳೆದ ಫೆಬ್ರವರಿಯಲ್ಲಿ ಆರ್.ಎನ್.ಆರ್. ಸ್ಟೀಮ್ ರೈಸ್ ದರ ಕೆಜಿಗೆ 57 -58 ರೂ. ಇತ್ತು. ಈಗ 48 -49 ರೂಪಾಯಿ ಇದೆ. ಸೋನಾ ಸ್ಟೀಮ್ ರೈಸ್ ದರ ಕೆಜಿಗೆ 56 ರೂ. ನಿಂದ 47 ರೂ.ಗೆ ಇಳಿಕೆಯಾಗಿದೆ. ರಾ ರೈಸ್ ದರ 55 -57 ರೂ. ಇದೆ.