ಬೆಂಗಳೂರು: ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಶಂಕಿತ ಆರೋಪಿಯ ನಾಲ್ಕು ಪೋಟೋ ರಿಲೀಸ್ ಮಾಡಿದ ಎನ್ ಐಎ. ೀ ಶಂಕಿತ ಆರೋಪಿ ಎಲ್ಲೆಲ್ಲಿ ಸುತ್ತಾಡಿದ ಏನೇಲ್ಲಾ ಮಾಡುತ್ತಿದ್ದ ಎಂದು ನಾಲ್ಕು ಆಯಾಮಗಳಲ್ಲಿ ಇರುವ ಫೋಟೋಗಳನ್ನ ರಿಲೀಸ್ ಮಾಡಿದ್ದು ತಕ್ಷಣ ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ನವಿ ಮಾಡಲಾಗಿದೆ.
ಸಾರ್ವಜನಿಕರಿಗೆ ಪೋಟೋ ದಲ್ಲಿರುವ ವ್ಯಕ್ತಿ ಕಂಡು ಬಂದ್ರೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದ್ದು ಫೋನ್ ನಂಬರ್ ಮತ್ತು ಇ ಮೇಲ್ ಐಡಿ ಕೊಟ್ಟು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ ಹಾಗೆ ನಿನ್ನೆಯಷ್ಟೇ ಎರಡು ವಿಡಿಯೋ ರಿಲೀಸ್ ಮಾಡಿದ್ದ ಎನ್ ಐಎ ಅಧಿಕಾರಿಗಳು
ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, 10 ಜನರು ಗಾಯಗೊಂಡಿದ್ದರು. ಮಾಸ್ಕ್ ಮತ್ತು ಟೋಪಿ ಧರಿಸಿದ ಶಂಕಿತನು ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇದೆ ಎಂದು ನಂಬಲಾದ ಚೀಲವನ್ನು ಇರಿಸಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.
— NIA India (@NIA_India) March 8, 2024
ಬೆಂಗಳೂರಿನ ವೈಟ್ಫೀಲ್ಡ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಬೆಳಿಗ್ಗೆ ವಿಶೇಷ ಆಚರಣೆಗಳು ನಡೆದವು, ಅಲ್ಲಿ ಒಂದು ವಾರದ ಹಿಂದೆ ಸ್ಫೋಟ ಸಂಭವಿಸಿ ಒಂಬತ್ತು ಜನರು ಗಾಯಗೊಂಡಿದ್ದರು.