ನವದೆಹಲಿ: ಮಾರ್ಚ್ ಮೊದಲ ದಿನವೇ ಜನರಿಗೆ ಬಿಗ್ ಶಾಕ್ ಆಗಿದೆ. ಹೌದು ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು 25 ರೂ.ಗಳಷ್ಟು ಹೆಚ್ಚಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು (OMCs) ಶುಕ್ರವಾರ ವಾಣಿಜ್ಯ LPG ಗ್ಯಾಸ್ ಸಿಲಿಂಡರ್ಗಳ ಬೆಲೆಗಳನ್ನು ಪರಿಷ್ಕರಿಸಿವೆ.
The prices of 19 Kg commercial LPG gas cylinders hiked by Rs 25 with effect from today. The retail price of a 19 Kg commercial LPG cylinder in Delhi reaches Rs. 1795 per cylinder pic.twitter.com/5smYxwlxEP
— ANI (@ANI) March 1, 2024
ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 25 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ.ಈಗಿನ ಬೆಲೆಗಳ ಏರಿಕೆಯ ನಂತರ, ದೆಹಲಿಯಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ 1,795 ರೂ.ಗೆ ಲಭ್ಯವಾಗಲಿದೆ.
ಮದುವೆಗೂ ಮುನ್ನ ಗಂಡು, ಹೆಣ್ಣು ಈ ಪರೀಕ್ಷೆ ಮಾಡಿಸಲೇಬೇಕು!? – ತಜ್ಞರು ಹೇಳಿದಿಷ್ಟು!
ಬೆಲೆ ಏರಿಕೆಯು ಕೋಲ್ಕತ್ತಾ, ಮುಂಬೈ, ಚೆನ್ನೈ ಮತ್ತು ಇತರ ಮಹಾನಗರಗಳ ಜನರ ಮೇಲೂ ಪರಿಣಾಮ ಬೀರಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಕೋಲ್ಕತ್ತಾದಲ್ಲಿ 1,911 ರೂ., ಮುಂಬೈನಲ್ಲಿ 1,749 ರೂ. ಮತ್ತು ಚೆನ್ನೈನಲ್ಲಿ 1,960.50 ರೂ.ಗೆ ಲಭ್ಯವಾಗಲಿದೆ.