ವಿಚಿತ್ರ ಉಡುಪು ಧರಿಸಿ ಪ್ರೀಮಿಯರ್ ಶೋಗೆ ಬಂದ ‘ಸ್ಪೈಡರ್ ಮ್ಯಾನ್’ ನಟಿ ಜೆಂಡೆಯಾ
ಇಂಗ್ಲಿಷ್ ನ ‘ಸ್ಪೈಡರ್ಮ್ಯಾನ್’ ಸಿನಿಮಾದಿಂದ ಖ್ಯಾತಿ ಗಳಿಸಿದ ನಟಿ ಜೆಂಡೆಯಾ ಇದೀಗ ವಿಚಿತ್ರ ಉಡುಗೆ ಧರಿಸಿಕೊಂಡು ಸದ್ದು ಮಾಡುತ್ತಿದ್ದಾರೆ.
‘ಜೆಂಡೆಯಾ’ ಡ್ಯೂನ್ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಎರಡನೇ ಭಾಗ ಇದೀಗ ಬಿಡುಗಡೆಗೆ ರೆಡಿಯಾಗಿದೆ.
ಡ್ಯೂನ್ 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದರ ಪ್ರೀಮಿಯರ್ ಶೋ ಲಂಡನ್ ನಲ್ಲಿ ಆಯೋಜಿಸಲಾಗಿದ್ದು ಈ ವೇಳೆ ಜೆಂಡೆಯಾ ವಿಚಿತ್ರ ಉಡುಪು ಧರಿಸಿ ಆಗಮಿಸಿದ್ದಾರೆ.
ಭವಿಷ್ಯ, ಭೂತಕಾಲಗಳ ವಿಚಿತ್ರ ಕತೆಯನ್ನು ‘ಡ್ಯೂನ್’ ಸಿನಿಮಾ ಒಳಗೊಂಡಿದ್ದು, ಸಿನಿಮಾದ ನಾಯಕಿಯ ಪಾತ್ರದಲ್ಲಿ ಜೆಂಡೆಯಾ ಕಾಣಿಸಿಕೊಂಡಿದ್ದಾರೆ.
ಜೆಂಡೆಯಾರ ವಿಚಿತ್ರ ಉಡುಪಿನ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಜೆಂಡೆಯಾ ಧರಿಸಿದ್ದ ಉಡುಪನ್ನು ಟ್ರೋಲ್ ಮಾಡಲಾಗುತ್ತಿದೆ.
‘ಡ್ಯೂನ್ 2’ ಸಿನಿಮಾ ಪ್ರೀಮಿಯರ್ ಶೋ ಲಂಡನ್ನಲ್ಲಿ ನಡೆದಿದ್ದು ಕೆಲವೇ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ತೆರೆಗೆ ಬರಲಿದೆ.