ಮೈಸೂರು: ಮೈಸೂರಿನ ಚಿಕ್ಕನಹಳ್ಳಿ ಅರಣ್ಯ ಬಳಿ ಹುಲಿ ಬೋನಿಗೆ ಬಿದ್ದಿದೆ. ಹೌದು ಸರಗೂರು ತಾಲೂಕಿನ ಚಿಕ್ಕನಹಳ್ಳಿ ಅರಣ್ಯ ಬಳಿಯ ಜಮೀನೊಂದರಲ್ಲಿ ಇರಿಸಲಾಗಿದ್ದ ಬೋನಿಗೆ ಹುಲಿ ಬಿದ್ದಿದೆ. ಮೈಸೂರು ತಾಲೂಕಿನ ಚಿಕ್ಕಕಾನ್ಯ ಬಳಿ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿತ್ತು.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿದ್ದ ಹಿನ್ನಲೆ ಹುಲಿ ಸೆರೆಗೆ ಹಲವು ಕಡೆ ಬೋನನ್ನು ಇರಿಸಲಾಗಿತ್ತು. ಇದೀಗ ಐದು ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ. ಸದ್ಯ ಸ್ಥಳಕ್ಕೆ ಮೈಸೂರು ವೃತ್ತದ ಸಿ.ಎಫ್ ಡಾ. ಮಾಲ ತಿಪ್ರಿಯಾ, ಡಿ.ಸಿ.ಎಫ್ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.