ನಮ್ಮ ಹಸ್ತ ಮತ್ತು ಪಾದಗಳ ಚರ್ಮ ಇತರ ಭಾಗಕ್ಕಿಂತ ಭಿನ್ನ ಮತ್ತು ವಿಶಿಷ್ಟವಾಗಿವೆ. ಇದರಲ್ಲಿ ಕೂದಲ ಬುಡಗಳೇ ಇಲ್ಲ ಹಾಗೂ ಅತಿಯಾದ ವಿಸ್ತಾರ ಪಡೆದಿದೆ. ಅಲ್ಲದೇ ಹಿಡಿತ ಸಾಧಿಸಲು ಸೂಕ್ಷ್ಮವಾದ ಗೆರೆಗಳೂ ಇರುತ್ತವೆ. ಬೆರಳು ತುದಿಗಳಲ್ಲಿರುವ ಈ ಗುರುತುಗಳು ಪ್ರತಿ ವ್ಯಕ್ತಿಯಲ್ಲಿಯೂ ಭಿನ್ನವಾಗಿದ್ದು ಬೆರಳಚ್ಚು ಎಂದೇ ಗುರುತಿಸಲ್ಪಡುತ್ತದೆ.
ಸೆಖೆ ಹಾಗೂ ಇತರ ಸಂದರ್ಭಗಳಲ್ಲಿ ದೇಹವನ್ನು ತಂಪಾಗಿರಿಸಲು ದೇಹ ಬೆವರಿನ ಮೂಲಕ ನೀರನ್ನು ಚರ್ಮದಿಂದ ಹೊರಸೂಸುವಂತೆ ಮಾಡುತ್ತದೆ. ಈ ನೀರು ದೇಹದ ತಾಪಮಾನವನ್ನು ಬಳಸಿಕೊಂಡು ಆವಿಯಾಗುವ ಮೂಲಕ ದೇಹವನ್ನು ತಂಪಾಗಿರಿಸುತ್ತದೆ.
ಈ ಸಮಸ್ಯೆ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆರಂಭಿಕ ಹಂತದಲ್ಲಿ ರೋಗಲಕ್ಷಣಗಳನ್ನು ಪತ್ತೆಹಚ್ಚುವ ಮೂಲಕ ಫ್ಯಾಟಿ ಲಿವರ್ ಸಮಸ್ಯೆಯನ್ನು ಸುಲಭವಾಗಿ ಗುಣಪಡಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಅಂಗೈ ಬೆವರುವುದು ಕೊಬ್ಬಿನ ಯಕೃತ್ತಿನ ಸಂಕೇತವಾಗಿದ್ದರೂ, ಈ ಲಕ್ಷಣಗಳು ಎಲ್ಲಾ ಸಂದರ್ಭಗಳಲ್ಲಿ ಒಂದೇ ಆಗಿರುವುದಿಲ್ಲ ಎಂದು ದೆಹಲಿಯ ಹಿರಿಯ ವೈದ್ಯ ಡಾ.ಅಜಯ್ ಕುಮಾರ್ ಹೇಳುತ್ತಾರೆ. ಕೆಲವು ಸಂದರ್ಭಗಳಲ್ಲಿ, ಅಂಗೈಗಳ ಮೇಲೆ ಸೆಬಾಸಿಯಸ್ ಗ್ರಂಥಿಗಳ ಉಪಸ್ಥಿತಿಯಿಂದಾಗಿ ಬೆವರು ಕೂಡ ಉಂಟಾಗುತ್ತದೆ.
ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ 7 ಬೀಜಗಳನ್ನು ಸೇವಿಸಿ!
ಈ ತೊಂದರೆ, ಅನುವಂಶಿಕವಾಗಿದೆ ಹಾಗೂ ಕೆಲವು ವ್ಯಕ್ತಿಗಳಲ್ಲಿ ಮಾತ್ರವೇ ಏಕಾಗಿ ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ವಿಜ್ಞಾನದ ಬಳಿ ನಿಖರವಾದ ಉತ್ತರವಿಲ್ಲ. ಕೆಲವರಿಗೆ, ಬೇರಾವುದೋ ಕಾಯಿಲೆ ಅಥವಾ ಚಿಕಿತ್ಸೆಯ ಪರಿಣಾಮದಿಂದಲೂ ಈ ಬೆವರುವಿಕೆ ಕಾಣಿಸಿಕೊಂಡಿರಬಹುದು.
ಇದೇನೂ ಗಾಬರಿ ಬೀಳಬೇಕಾದ ತೊಂದರೆಯೇನೂ ಅಲ್ಲ. ನಿತ್ಯದ ಕೆಲಸಗಳನ್ನು ಒಣ ಕೈಗಳಲ್ಲಿ ಮಾಡುವಷ್ಟು ಸರಾಗವಾಗಿ ಬೆವರಿನ ಕೈಗಳಿಂದ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬಿಟ್ಟರೆ, ಆರೋಗ್ಯದ ವಿಷಯವನ್ನು ಪರಿಗಣಿಸಿದರೆ ಇದು ಯಾವುದೇ ತೊಂದರೆಯಲ್ಲ ಹಾಗೂ ಅನಾರೋಗ್ಯವೂ ಅಲ್ಲ.
ಇದನ್ನು ಕೆಲವು ಸುಲಭ ಮತ್ತು ನೈಸರ್ಗಿಕ ಚಿಕಿತ್ಸೆಗಳಿಂದಲೇ ಸಾಕಷ್ಟು ಮಟ್ಟಿಗೆ ಸರಿಪಡಿಸಿಕೊಳ್ಳಬಹುದು. ನೈಸರ್ಗಿಕ ವಿಧಾನಗಳು ಕೊಂಚ ನಿಧಾನವಾಗಿ ಕೆಲಸ ಮಾಡುವ ಕಾರಣ, ನಿಮಗೆ ತಕ್ಷಣಕ್ಕೆ ಇದರ ಪರಿಣಾಮ ಗೊತ್ತಾಗುವುದಿಲ್ಲ. ಹಾಗಾಗಿ, ಕೊಂಚ ತಾಳ್ಮೆ ವಹಿಸಿ ಈ ಚಿಕಿತ್ಸೆಯನ್ನು ಕೆಲವಾರು ದಿನಗಳವರೆಗೆ ಮುಂದುವರೆಸಿಕೊಂಡು ಹೋಗಬೇಕಾಗಿ ಬರಬಹುದು
ಆಹಾರ ಕ್ರಮವನ್ನು ನಿಯಂತ್ರಿಸುವ ಮೂಲಕ ಫ್ಯಾಟಿ ಲಿವರ್ ಸಮಸ್ಯೆಯನ್ನು ನಿಯಂತ್ರಿಸಲು ಡಾ.ಜೈನ್ ಸಲಹೆ ನೀಡುತ್ತಾರೆ. ಮೊದಲನೆಯದಾಗಿ, ಆಹಾರದಲ್ಲಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕು. ಪ್ರತಿದಿನ ವ್ಯಾಯಾಮ ಮಾಡುವುದು ಕೂಡ ಬಹಳ ಮುಖ್ಯ. ಫಾಸ್ಟ್ ಫುಡ್ ಅನ್ನು ಆದಷ್ಟು ದೂರವಿಡಿ. ಆದಾಗ್ಯೂ, ನೀವು ಅಜೀರ್ಣ ಮತ್ತು ಹೊಟ್ಟೆಯಲ್ಲಿ ಹೆಚ್ಚುವರಿ ಅನಿಲ ರಚನೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.