ಭಾರತೀಯ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಈಗಾಗಲೇ ಹಲವು ಬಾರಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿದ್ದು, ಕಚೇರಿಯಿಂದಲೇ ಕೆಲಸ ಮಾಡುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಅದಾಗ್ಯೂ ಕೆಲ ಉದ್ಯೋಗಿಗಳು ಇನ್ನೂ ಮನೆಯಿಂದಲೇ ಕೆಲಸ ಮುಂದುವರೆಸಿದ್ದಾರೆ.
ಇಂತಹ ಉದ್ಯೋಗಿಗಳಿಗೆ ಮಾರ್ಚ್ ಅಂತ್ಯದೊಳಗೆ ಕಚೇರಿಗೆ ಬರುವುದಕ್ಕೆ ತನ್ನ ಅಂತಿಮ ಗಡುವನ್ನು ಸಂಸ್ಥೆ ವಿಸ್ತರಿಸಿದ್ದು, ಇದು ತನ್ನ ಕೊನೆಯ ಸೂಚನೆಯಾಗಿದ್ದು, ಒಂದು ವೇಳೆ ಈ ಸೂಚನೆಯನ್ನು ಪಾಲಿಸದೇ ಹೋದಲ್ಲಿ ಕಾನೂನು ಪರಿಣಾಮ ಎದುರಿಸಿ ಎಂದು ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.
Lizard Falling Meaning: ಹಲ್ಲಿ ಮೈ ಮೇಲೆ ಬಿದ್ದರೆ ಶುಭವೋ? ಅಶುಭವೋ? ಇಲ್ಲಿದೆ ನೋಡಿ ಉತ್ತರ
ತನ್ನ ಈ ಸೂಚನೆಯನ್ನು ಅಂತಿಮ ಕರೆ ಎಂದು ಹೇಳಿರುವ ಈ ಸಾಫ್ಟ್ವೇರ್ ಸಂಸ್ಥೆ ಟಿಸಿಎಸ್ ಕಳೆದ ವರ್ಷದ ಅಕ್ಟೋಬರ್ನಲ್ಲಿಯೇ ತನ್ನ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನ ಕಚೇರಿಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ನಾವು ತಾಳ್ಮೆಯಿಂದ ಗಮನಿಸುತ್ತಿದ್ದೇವೆ. ಉದ್ಯೋಗಿಗಳು ಕಚೇರಿಗೆ ಮರಳಬೇಕು ಎಂಬ ತಾತ್ವಿಕ ನಿಲುವನ್ನು ತೆಗೆದುಕೊಂಡಿದ್ದೇವೆ.
ಈ ಕುರಿತು ನಾವು ಸಿಬ್ಬಂದಿಗೆ ಕೊನೆಯ ಸಂದೇಶವನ್ನು ಈಗಾಗಲೇ ಕಳುಹಿಸಿದ್ದೇವೆ . ಈ ಸೂಚನೆಯನ್ನು ಅವರು ಪಾಲಿಸಲು ಸಿದ್ಧರಿಲ್ಲದೇ ಹೋದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟಿಸಿಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ಜಿ ಸುಬ್ರಮಣ್ಯಂ ಇಕನಾಮಿಕ್ ಟೈಮ್ಸ್ಗೆ ಹೇಳಿದ್ದಾರೆ ಎಂದು ಅ ವೆಬ್ಸೈಟ್ ವರದಿ ಮಾಡಿದೆ.