ರಾಯಚೂರು: ಬೊಲೆರೊ ಪಲ್ಟಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ತಾಲ್ಲೂಕಿನ ಯಾಪಲದಿನ್ನಿ ಬಳಿಯ ಎನ್ಎಚ್ 150 (C) ಮಾರ್ಗದಲ್ಲಿ ನಡೆದಿದೆ. ಆಂಜನೇಯ(23)ಮೃತ ಪ್ರಯಾಣಿಕ.
ಮೃತ ಆಂಜನೇಯ ರಾಯಚೂರು ತಾಲ್ಲೂಕಿನ ಚಂದ್ರಬಂಡಾ ಗ್ರಾಮದ ಯುವಕ. ಬೊಲೆರೊದಲ್ಲಿ ಮೂವರು ಪ್ರಯಾಣಿಸುತ್ತಿದ್ದ ವೇಳೆ ಪಲ್ಟಿ ಆಗಿದೆ. ಚಾಲಕ ವಿರೇಶ್ ನಿರ್ಲಕ್ಷಕ್ಕೆ ಬೊಲೆರೊ ಪಲ್ಟಿ ಆಗಲು ಕಾರಣವೆಂದು ಆರೋಪ ಮಾಡಲಾಗಿದೆ.