ವಿಜಯನಗರ: ತಾಯಿಯೊಂದಿಗೆ ರಸ್ತೆ ದಾಟುವ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ಕು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಟ್ಟೂರು ತಾಲೂಕಿನ ಕೆ. ಅಯ್ಯನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೂಗಮ್ಮ ಎಂಬುವವರ ಪುತ್ರಿ ವರ್ಷಿಣಿ (4) ಮೃತ ಬಾಲಕಿಯಾಗಿದ್ದು, ತಾಯಿ ತನ್ನಿಬ್ಬರ ಮಕ್ಕಳ ಜೊತೆಗೆ ಆಸ್ಪತ್ರೆಗೆ ಹೋಗುತ್ತಿದ್ದಳು. ಈ ವೇಳೆ ಬಸ್ ಸ್ಟಾಪ್ನಲ್ಲಿ ಬಾಲಕಿ ವರ್ಷಿಣಿ ನಿಂತಿದ್ದಳು.
ಲಾರಿ ರಸ್ತೆ ಮೇಲೆ ಸ್ಪೀಡ್ ಆಗಿ ಬರುತ್ತಿದ್ದಾಗ ಬಾಲಕಿ ಲಾರಿಯತ್ತ ಓಡಿ ಹೋಗಿದ್ದಾಳೆ. ಬಸ್ ಸ್ಟಾಪ್ ಎದುರು ಹಂಪ್ಸ್ ಇಲ್ಲದ ಕಾರಣ ವೇಗವಾಗಿ ಹೋಗುತ್ತಿದ್ದ ಲಾರಿ ಬಾಲಕಿ ಮೇಲೆ ಹರಿದಿದೆ. ಚಾಲಕನ ಅಜಾಗರೂಕತೆ ಯಿಂದ ಅಪಘಾತ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಟ್ಟೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.