ನೆಲಮಂಗಲ: ಸಂಕ್ರಾಂತಿ ಹಬ್ಬದ ಹಿನ್ನಲೆ ಕಾಟುಮರಾಯನ ಗುಡಿಯಲ್ಲಿ ಬಹಳ ಅದ್ದೂರಿಯಾಗಿ ಪೂಜೆ ಪುರಸ್ಕಾರ ಜರುಗಿದೆ.
ರೈತರ ಗ್ರಾಮೀಣ ಜನರ ಸುಗ್ಗಿ ಸಂಭ್ರಮದ ಸಂಕ್ರಮಣ ಇದಾಗಿದ್ದು, ಜನರು ಪ್ರಾಣಿ ಪಕ್ಷಿಗಳು ಜೀವ ಸಂಕುಲಕ್ಕೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿದ್ದಾರೆ. ಕಾಟುಮರಾಯನಿಗೆ ಹೆಳ್ಳುಬೆಲ್ಲ, ಕಬ್ಬು,ಕಡಲೆಕಾಯಿ, ಗೆಣಸು ಇಟ್ಟು ಪೂಜೆ ಮಾಡಲಾಗಿದೆ.
ನೆಲಮಂಗಲ ನಗರದ ಮಾರುತಿ ನಗರದ ಗ್ರಾಮಸ್ಥರಿಂದ ವಿಶೇಷ ಪೂಜೆ ಮಾಡಲಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಶೇಷ ಹಬ್ಬ ಅಚರಣೆ ಮಾಡಲಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನ ಇದಾಗಿದ್ದು, ಜಾನುವಾರುಗಳಿಂದ ಕಿಚ್ಚ ಹಾಯಿಸುವ ಮೂಲಕ ಸಂಕ್ರಾಂತಿ ಹಬ್ಬ ಆಚರಣೆ ಮಾಡಲಾಗಿದೆ. ಗ್ರಾಮದ ಹಿರಿಯರಿಗೆ ಗ್ರಾಮಸ್ಥರು ಗೌರವ ಸಲ್ಲಿಸಿದ್ದಾರೆ.