ಚಾಮರಾಜನಗರ:– ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಿಚ್ಚು ಆಯಿಸುವ ಮೂಲಕ ರೈತರು ಮಕರ ಸಂಕ್ರಾಂತಿ ಹಬ್ಬ ಆಚರಿಸಿ ಸಂಭ್ರಮಿಸಿದರು. ಗಡಿ ಜಿಲ್ಲೆಯ ರೈತರಿಂದ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ.
ಸಂಕ್ರಾಂತಿಯಲ್ಲಿ ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಆಯಿಸೋದು ವಾಡಿಕೆ ಇದ್ದು, ರೈತ ಕುಟುಂಬದಿಂದ ಗೋವುಗಳಿಗೆ ಭಕ್ತಿಯಿಂದ ಪೂಜೆ ಮಾಡಲಾಗಿದೆ. ಪೂಜೆ ನಂತರ ಬೆಂಕಿಯಲ್ಲಿ ಓಡಿಸಿ ಕಿಚ್ಚು ಆಯಿಸೋದು ಪದ್ದತಿ. ಜಾನುವಾರುಗಳನ್ನು ಬೆಂಕಿಯ ನಡುವೆ ಓಡಿಸಿ ಸಂಕ್ರಾಂತಿ ಹಬ್ಬವನ್ನು ಗಡಿ ಜಿಲ್ಲೆಯ ರೈತರು ಆಚರಣೆ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಹೋಬಳಿಯ ಹೆಗ್ಗವಾಡಿಪುರದಲ್ಲಿ ರೈತರು ಸಂಭ್ರಮಿಸಿ, ಗ್ರಾಮದೊಳಗೆ ಕಿಚ್ಚು ಹಾಯಿಸಿದ್ದಾರೆ. ಮಕರ ಸಂಕ್ರಾಂತಿ ಹಬ್ವದಂದು ಜಾನುವಾರುಗಳ ಜೊತೆ ಕಿಚ್ಚು ಆಯಿಸಿದರೆ ರೋಗ ರುಜಿನಗಳಿಂದ ಮುಕ್ತ ಎಂಬ ಪ್ರತೀತಿ ಇದ್ದು, ಗ್ರಾಮೀಣ ಭಾಗದಲ್ಲಿ ಜಾನುವಾರುಗಳನ್ನು ಕಿಚ್ಚು ಆಯಿಸೋದು ಪ್ರತೀತಿ ಆಗಿದೆ. ಅದರಂತೆ ಗ್ರಾಮೀಣ ಭಾಗದಲ್ಲಿ ರೈತರಿಂದ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ.