ಚೈತ್ರಾ ಆಚಾರ್ (Chaithra Achar) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸಂಚಲನ ಮೂಡಿಸುತ್ತಲೇ ಇರುತ್ತಾರೆ.
ಇದೀಗ ‘ಟೋಬಿ’ (Toby) ಹುಡುಗಿಯ ನ್ಯೂ ಲುಕ್ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.
ಕಪ್ಪು ಬಣ್ಣದ ಶಾರ್ಟ್ ಟಾಪ್ ಮತ್ತು ನೀಲಿ ಬಣ್ಣದ ಜೀನ್ಸ್ ತೊಟ್ಟು ನಟಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ನಯಾ ಲುಕ್ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ಚೈತ್ರಾ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿರೋದು ಅಭಿಮಾನಿಗಳ ಗಮನ ಸೆಳೆದಿದೆ.
‘ಟೋಬಿ’ ಸುಂದರಿಯ ಮೈಮಾಟಕ್ಕೆ ಪಡ್ಡೆಹುಡುಗರು ಬಗೆ ಬಗೆಯ ಕಾಮೆಂಟ್ ಹಾಕುತ್ತಿದ್ದಾರೆ.
ಇತ್ತೀಚೆಗೆ ಫೋಟೋಶೂಟ್ವೊಂದಕ್ಕೆ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ (Troll) ಆಗಿತ್ತು.
ಅದಕ್ಕೆ ಖಡಕ್ ಆಗಿ ಚೈತ್ರಾ ರಿಯಾಕ್ಟ್ ಮಾಡಿದ್ದರು. ದೇವರ ಹಾಡು ಹಾಡ್ತಾರೆ ಆದರೆ ಹಾಕುವ ಬಟ್ಟೆ ಈ ತರಹ ಎಂದು ಕಾಮೆಂಟ್ ಮಾಡುವವರಿಗೆ ನಟಿ ತಕ್ಕ ಉತ್ತರ ನೀಡಿದ್ದರು.
ಬೇರೇ ಮನೆ ಹೆಣ್ಣು ಮಗಳ ಮರ್ಯಾದೆ ತೆಗೆಯಬೇಕು ಎಂದು ಪಣ ತೊಟ್ಟವರಿಗೆ ಏನು ಹೇಳೋದು ಅಂತಾ ನಟಿ ಗರಂ ಆಗಿದ್ದರು.
2023ರಲ್ಲಿ ‘ಟೋಬಿ’ (Toby) ಮತ್ತು ‘ಸಪ್ತಸಾಗರದಾಚೆ ಎಲ್ಲೋ’ ಪಾರ್ಟ್ 2 ಈ ಚಿತ್ರಗಳು ಚೈತ್ರಾ ಆಚಾರ್ (Chaithra Achar) ಕೆರಿಯರ್ಗೆ ಬಿಗ್ ಬ್ರೇಕ್ ನೀಡಿದೆ.