ಬೆಂಗಳೂರು:- ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬಿಬಿಎಂಪಿ ವ್ಯಾಪ್ತಿಯ ಹಲವು ಕಡೆ ಶೀಘ್ರವೇ ವೆಂಡಿಂಗ್ ಜೋನ್ ತಲೆ ಎತ್ತಲಿದೆ.
ಪಾಲಿಕೆ ಪುಟ್ ಪಾತ್ ವ್ಯಾಪಾರ ತೆರವು ಕಾರ್ಯಾಚರಣೆ ಹಿನ್ನೆಲೆ, ವ್ಯಾಪಾರಿಗಳ ಬದುಕು ಸಂಕಷ್ಟಕ್ಕೀಡಾಗಿತ್ತು..ಹೀಗಾಗಿ ಪಟ್ಟಣ ವ್ಯಾಪಾರ ಸಮಿತಿ ವೆಂಡಿಂಗ್ ಜೋನ್ ತೆರೆಯಲು ಜಾಗದ ಹುಡುಕಾಟ ನಡೆಸಿದೆ. ಪಟ್ಟಣ ವ್ಯಾಪಾರ ಸಮಿತಿ ಸದಸ್ಯರನ್ನೊಳಗೊಂಡ ಬಿಬಿಎಂಪಿ ವಲಯದ ಎಂಜಿನಿಯರ್ ಜೊತೆ ಸ್ಥಳ ಪರಿಶೀಲಿಸಲಾಗಿದೆ.
ಮಲ್ಲೇಶ್ವರದ ಸಂಪಿಗೆ ರಸ್ತೆ, ದಾಸನ ಪುರ, ಗಾಂಧಿ, ಮಹದೇವಪುರ, ಆರ್.ಆರ್. ನಗರ ವಲಯ, ದಕ್ಷಿಣ ವಲಯ, ಗೋವಿಂದ ರಾಜ ನಗರ ಸೇರಿದಂತೆ ಹಲವು ಕಡೆ ಸ್ಥಳ ಪರಿಶೀಲಿಸಲಾಗಿದೆ.