ಅಂಚೆ ಕಚೇರಿಗಳು ಜನಸಾಮಾನ್ಯರಿಗೆ ಅನುಕೂಲವಾಗುವ ಹಲವು ಸ್ಕೀಮ್ಗಳನ್ನು ವಿತರಿಸುವ ಕೇಂದ್ರವಾಗಿದೆ. ಹಲವು ಉಳಿತಾಯ ಯೋಜನೆಗಳನ್ನು ಪೋಸ್ಟ್ ಆಫೀಸ್ (post office schemes) ಆಫರ್ ಮಾಡುತ್ತದೆ. ಉತ್ತಮ ಬಡ್ಡಿದರ ಕೂಡ ನೀಡಲಾಗುತ್ತದೆ. ಹಿರಿಯ ನಾಗರಿಕರ ಸೇವಿಂಗ್ಸ್ ಸ್ಕೀಮ್ನಿಂದ ಹಿಡಿದು ಕಿಸಾನ್ ವಿಕಾಸ್ ಪತ್ರದವರೆಗೆ ಹಲವು ಸೇವಿಂಗ್ಸ್ ಸ್ಕೀಮ್ಗಳನ್ನು ಅಂಚೆ ಕಚೇರಿಯಲ್ಲಿ ಪಡೆಯಬಹುದಾಗಿದೆ
BSNLನಿಂದ ಗ್ರಾಹಕರಿಗೆ ಮತ್ತಷ್ಟು ಬಿಗ್ ಆಫರ್: 200 ರೂ.ಗೂ ಕಡಿಮೆ ಬೆಲೆಗೆ 2GB ಡಾಟಾ ಫ್ರೀ!
ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್
ವಯೋವೃದ್ಧರಿಗೆಂದು ರೂಪಿಸಲಾಗಿರುವ ಯೋಜನೆ ಇದು. 60 ವರ್ಷ ವಯಸ್ಸು ದಾಟಿದ ವ್ಯಕ್ತಿಗಳು ಎಸ್ಸಿಎಸ್ಎಸ್ ಸ್ಕೀಮ್ ಅನ್ನು ತೆರೆಯಬಹುದು. ಇದಕ್ಕೆ ವರ್ಷಕ್ಕೆ ಶೇ. 8.2ರಷ್ಟು ಬಡ್ಡಿ ಸಿಗುತ್ತದೆ. 5 ವರ್ಷಕ್ಕೆ ಮೆಚ್ಯೂರಿಟಿ ಆಗುತ್ತದೆ. ಅದಾದ ಬಳಿಕ ಬೇಕೆಂದರೆ ಮೂರು ವರ್ಷಕ್ಕೊಮ್ಮೆ ಸ್ಕೀಮ್ ಅವಧಿ ವಿಸ್ತರಿಸಿಕೊಳ್ಳುತ್ತಾ ಹೋಗಬಹುದು.
ಸುಕನ್ಯಾ ಸಮೃದ್ದಿ ಯೋಜನೆ
ಇದು 10 ವರ್ಷ ವಯಸ್ಸಿನೊಳಗಿನ ಬಾಲಕಿಯರಿಗೆ ಮಾಡಿಸಿದ ಸ್ಕೀಮ್. ಇದಕ್ಕೆ ವಾರ್ಷಿಕ ಶೇ. 8ರಷ್ಟು ಬಡ್ಡಿ ನಿಗದಿ ಮಾಡಲಾಗಿದೆ. 10 ವರ್ಷದೊಳಗಿನ ಯಾವುದೇ ಬಾಲಕಿಯ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ಆರಂಭಿಸಬಹುದು
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್
ಅಂಚೆ ಕಚೇರಿಯಲ್ಲಿ ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ ಅನ್ನು ಯಾರು ಬೇಕಾದರೂ ತೆರೆಯಬಹುದು. ಒಂದು ವರ್ಷದಲ್ಲಿ ಕನಿಷ್ಠ ಹೂಡಿಕೆ 100 ಇದೆ. ವರ್ಷದಲ್ಲಿ ಒಂದೂವರೆ ಲಕ್ಷ ರೂವರೆಗೂ ಹೂಡಿಕೆ ಮಅಡಬಹುದ. ಇದಕ್ಕೆ ಶೇ. 7.7ರಷ್ಟು ಬಡ್ಡಿದರವನ್ನು ನಿಗದಿ ಮಾಡಲಾಗಿದೆ.
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್
ಅಂಚೆ ಕಚೇರಿಯ ಅವಧಿ ಠೇವಣಿ ಯೋಜನೆಯಲ್ಲಿ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಇದು 5 ವರ್ಷದ ಠೇವಣಿಗೆ ಇರುವ ಬಡ್ಡಿದರ. ಹಾಗೆಯೇ, 1 ವರ್ಷ, 2 ವರ್ಷ ಮತ್ತು 5 ವರ್ಷದ ಅವಧಿ ಠೇವಣಿಯ ಆಯ್ಕೆಗಳಿವೆ. ಕಡಿಮೆ ಅವಧಿಗೆ ಬಡ್ಡಿದರ ತುಸು ಕಡಿಮೆ ಇರುತ್ತದೆ.