ಬೆಂಗಳೂರು: ಹಾಸನಾಂಬೆ ದೇವಸ್ಥಾನದಲ್ಲಿ ವಿದ್ಯುತ್ ಶಾಕ್ ಮತ್ತು ನೂಕು ನುಗ್ಗಲು ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಹಾಸನ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ವಿದ್ಯುತ್ ತಂತಿ ಬ್ಯಾರಿಕೇಡ್ ಗೆ ಟಚ್ ಆಗಿ ಈ ಘಟನೆ ಆಗಿದೆ ಓರ್ವ ಮಹಿಳೆಗೆ ಸ್ಬಲ್ಪ ಗಾಯ ಆಗಿದೆ ಬೇರೆ ಯಾರಿಗೂ ಸಮಸ್ಯೆ ಆಗಿಲ್ಲ ಈ ಗಾಬರಿಯಲ್ಲಿ ಸ್ವಲ್ಪ ತುಳಿತ ಆಗಿದೆ ಸದ್ಯ ಎಲ್ಲವೂ ನಿಯಂತ್ರಣಕ್ಕೆ ಬಂದಿದೆ ಎಂದಿದ್ದಾರೆ.
ಶಾಸಕರು, ಸಂಸದರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಆತಂಕಕಾರಿ ಅಂಶ ಏನೂ ಇಲ್ಲ ಇವಾಗ ದರ್ಶನ ಮತ್ತೆ ಪ್ರಾರಂಭ ಆಗಿದೆ ಹಾಸನ ಜಿಲ್ಲಾಧಿಕಾರಿ ಬೆಂಗಳೂರಿಗೆ ಬಂದಿದ್ದರು ಸ್ಥಳಕ್ಕೆ ಹೋಗ್ತಿದ್ದಾರೆ ನಾನು ಘಟನಾ ಸ್ಥಳಕ್ಕೆ ತೆರಳುತ್ತಿದ್ದೇನೆ ನೂಕುನುಗ್ಗಲು, ಗಾಬರಿಯಲ್ಲಿ ಸ್ವಲ್ಪ ಜನ ಆತಂಕಗೊಂಡಿದ್ದರು
ಯಾರೂ ಆತಂಕಪಡುವ ಅಗತ್ಯವಿಲ್ಲ ಯಾವುದೇ ದೊಡ್ಡ ಆಘಾತಕಾರಿ ಘಟನೆ ನಡೆದಿಲ್ಲ ಭಕ್ತಾದಿಗಳಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಸಿಎಂ ಘಟನೆ ಬಗ್ಗೆ ಡಿಸಿ ಜೊತೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.