ಉಡುಪಿ: ಉಡುಪಿ ನಗರದ ಬನ್ನಂಜೆ ಜಯಲಕ್ಷ್ಮಿ ಸಿಲ್ಕ್ಸ್ ಎದುರು ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ಇಂದು ಒಂದು ಗಂಟೆ ಕಾಲ ಹೈಡ್ರಾಮ ನಡೆಯಿತು. ಆಟೋ ಚಾಲಕರೊಬ್ಬರು ಅಂಗಡಿ ಮುಂಭಾಗದಲ್ಲಿ ಆಟೋ ನಿಲ್ಲಿಸಿದಾಗ ಜಯಲಕ್ಷ್ಮೀ ಸಿಲ್ಕ್ಸ್ ನ ಮಾಲೀಕರೇ ಬಂದು ಅಟೋ ಚಾಲಕನ ಕೀ ಕಿತ್ತುಕೊಂಡ ಬಳಿಕ ಈ ಡ್ರಾಮಾ ಪ್ರಾರಂಭಗೊಂಡಿತು. ಕೀ ಕಿತ್ತುಕೊಂಡ ಬಳಿಕ ಎರಡು ವಾಹನಗಳನ್ನು ಅಟೋ ತೆಗೆಯದಂತೆ ಅಡ್ಡವಾಗಿ ಇಡಲಾಯಿತು ಎಂದು ಆಟೋ ಚಾಲಕ ಆರೋಪಿಸಿದ್ದಾರೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಈ ಘಟನೆ ಬಳಿಕ ಬನ್ನಂಜೆ ರಸ್ತೆಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಯ್ತು.ಆಟೋ ಚಾಲಕರು ಸ್ಥಳದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರಿಗೆ ಕರೆ ಮಾಡಿದರೂ ಪರಿಸ್ಥಿತಿ ಸರಿ ದಾರಿಗೆ ಬಂದಿರಲಿಲ್ಲ. ಇಲ್ಲಿ ನಿತ್ಯ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆಟೋ ಚಾಲಕರು ಆರೋಪಿಸಿದರು. ಪೊಲೀಸರು ಸ್ಥಳಕ್ಕೆ ಬಂದ ಬಳಿಕ ಅವರನ್ನು ಸಮಾಧಾನಪಡಿಸಲಾಯಿತು. ಘಟನೆಯಿಂದ ಆಕ್ರೋಶಗೊಂಡಿರುವ ಆಟೋ ಚಾಲಕರು ಎಸ್ಪಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.