ನ್ಯೂಯಾರ್ಕ್: ಹಂದಿಯ ಹೃದಯ ಕಸಿ ಪಡೆದ ವ್ಯಕ್ತಿಯೊಬ್ಬರು ಶಸ್ತ್ರಚಿಕಿತ್ಸೆಯ 40 ದಿನಗಳ ನಂತರ ಸಾವಿಗೀಡಾಗಿದ್ದಾರೆ. ಇವರು ವಿಶ್ವದಲ್ಲೇ ಹಂದಿ ಹೃದಯ ಕಸಿಗೊಳಗಾಗಿದ್ದ 2ನೇ ವ್ಯಕ್ತಿಯಾಗಿದ್ದರು. 58 ವರ್ಷದ ಲಾರೆನ್ಸ್ ಫೌಸೆಟ್ಟೆ ಮೃತವ್ಯಕ್ತಿ. ಹೃದಯಾಘಾತ ದಿಂದ ಅವರು ಸಾವನ್ನಪ್ಪಿದ್ದು, ಅವರಿಗೆ ಅತ್ಯಂತ ಪ್ರಾಯೋಗಿಕ ಶಸ್ತ್ರಚಿಕಿತ್ಸೆಯ ಮೂಲಕ 40 ದಿನಗಳ ಹಿಂದಷ್ಟೇ ಹಂದಿಯ ಹೃದಯ ಅಳವಡಿಸಲಾಗಿತ್ತು.
ಸೆಪ್ಟೆಂಬರ್ 20 ರಂದು ಅವರಿಗೆ ಹಂದಿಯ ಹೃದಯ ಅಳವಡಿಸಲಾಗಿತ್ತು. ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪ್ರಕಾರ, ಅವರಿಗೆ ಮೊದಲ ತಿಂಗಳಲ್ಲಿ ಹೃದಯವೂ ಆರೋಗ್ಯಕರವಾಗಿ ಕಾರ್ಯನಿರ್ವಹಿಸಿತ್ತು. ಆದರೆ ಇತ್ತೀಚೆಗೆ ಅದು ಸರಿಯಾಗಿ ಸ್ಪಂದಿಸದೇ ನಿರಾಕರಿಸುವ ಲಕ್ಷಣವನ್ನು ತೋರಿಸುತ್ತಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರು ಸುಮಾರು ಆರು ವಾರಗಳ ಕಾಲ ಬದುಕಿದ್ದು ಆಕ್ಟೋಬರ್ 30 ರಂದು ಸಾವನ್ನಪ್ಪಿದ್ದಾರೆ ಎಂದು ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಹಂದಿಯ ಹೃದಯ ಅಳವಡಿಸಿದ ನಂತರ ಫೌಸೆಟ್ ಆರೋಗ್ಯ ಸುಧಾರಿಸಿತ್ತು, ಅವರು ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಸಮಯ ಕಳೆದಿದ್ದರು. ಜೊತೆಗೆ ಪತ್ನಿ ಜೊತೆ ಇಸ್ಪೀಟ್ನ್ನು ಆಡುತ್ತಿದ್ದರು. ಆದರೆ ಇತ್ತೀಚೆಗೆ ಅವರ ಹೃದಯವು ನಿರಾಕರಣೆಯ ಆರಂಭಿಕ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿತು. ಇದು ಬಹಳ ಸವಾಲಿನ ಪ್ರಕರಣವಾಗಿದ್ದರೂ ಸಹ ವೈದ್ಯಕೀಯ ತಂಡ ಹೆಚ್ಚಿನ ಮುತುರ್ವಜಿ ವಹಿಸಿ ಅವರಿಗೆ ಚಿಕಿತ್ಸೆ ನೀಡಿದರಾದರೂ ಅವರು ಪ್ರಾಣ ಬಿಟ್ಟಿದ್ದಾರೆ.