ಚಾಮರಾಜನಗರ: ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನ ನಾನು ಹೇಳುತ್ತಿಲ್ಲ. ಕಾಂಗ್ರೆಸ್ ನವರೇ ಪ್ರಸ್ತಾಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬದಲಾವಣೆ ವಿಚಾರದ ತಮ್ಮ ಹೇಳಿಕೆಗೆ ಗರಂ ಆಗಿದ್ದ ಸಿದ್ದರಾಮಯ್ಯನವರಿಗೆ ಈ ಮೂಲಕ ಯತ್ನಾಳ್ ತಿರುಗೇಟು ನೀಡಿದರು. ಹೈಕಮಾಂಡ್ ಹೂಂ ಅಂದ್ರೆ ನಾನು ಮುಖ್ಯಮಂತ್ರಿ ಆಗ್ತೀನಿ ಎಂದು ಸಚಿವ ಪ್ರಿಯಾಂಕ ಖರ್ಗೆ ಒಂದು ಕಡೆ ಹೇಳಿದರೆ, ಸಿದ್ದರಾಮಯ್ಯರಿಗೆ ಮಾನಸಿಕವಾಗಿ ಚಿತ್ರ ಹಿಂಸೆ ಕೊಟ್ಟರೆ ನಾವು ಡಾ.ಪರಮೇಶ್ವರವರನ್ನು ಶಿಫಾರಸ್ಸು ಮಾಡುತ್ತೇವೆ ಎಂದು ಸಚಿವ ರಾಜಣ್ಣನವರೇ ಮತ್ತೊಂದು ಕಡೆ ಹೇಳಿದ್ದಾರೆ ಎಂದರು.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
5 ವರ್ಷ ಸಿದ್ದರಾಮಯ್ಯರೇ ಮುಖ್ಯಮಂತ್ರಿ ಅಂತ ಹೇಳಿದವರು ಈಗ ಯಾಕೆ ಪರಮೇಶ್ವರ್ ಹೆಸರನ್ನ ತೆಗೆದು ಕೊಂಡರು? 2013 ರ ಚುನಾವಣೆಯಲ್ಲಿ ಪರಮೇಶ್ವರ್ ರನ್ನು ಸೋಲಿಸಿದವರು ಯಾರು? ಪರಮೇಶ್ವರ್ ಮನೆಗೆ ತೆರಳಿ ಮಾಡಿಕೊಂಡ ಒಳ ಒಪ್ಪಂದ ಏನಾಯ್ತು? ಹಾಗೇ ಉಪಾಹಾರ ಮಾಡಬೇಕಿದ್ರೆ ಎಲ್ಲಾ ಸಚಿವರನ್ನ ಕರೆಯಬೇಕಿತ್ತಲ್ವಾ? ನೀವು ಡಿಕೆಶಿ ಇಬ್ಬರೂ ಕೂಡ ಕರೆದು ಮುಖ್ಯಮಂತ್ರಿ ವಿಚಾರ ಕುರಿತು ಮಾತನಾಡಬಾರದು ಎಂದು ವಾರ್ನಿಂಗ್ ನೀಡಿದರೂ ಮದ್ದೂರು ಶಾಸಕ ಉದಯ್ ಡಿಕೆಶಿ ಮುಖ್ಯಮಂತ್ರಿ ಆಗ್ತಾರೆ ಅಂತ ಯಾಕೆ ಹೇಳಿದ್ರು? ಎಂದು ಸಿಎಂ ಸಿದ್ದರಾಮಯ್ಯನವರಿಗೆ ಯತ್ನಾಳ ತಿರುಗೇಟು ನೀಡಿದರು.