ನ್ಯಾಷನಲ್ ಸ್ಟಾರ್ ಯಶ್ (Yash) ಅವರು ಯಶ್ 19 ಸಿನಿಮಾ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಚಿತ್ರದ ಅಪ್ಡೇಟ್ಗಾಗಿ ಪ್ರೇಕ್ಷಕರು ಕಳೆದ ಒಂದೂವರೆ ವರ್ಷದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ತಮ್ಮ ಮುಂದಿನ ಚಿತ್ರದ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಯಶ್ ಸಮಾರಂಭವೊಂದರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ, ನನಗೆ ನಿಮ್ಮ ಕಾತರ ಅರ್ಥವಾಗುತ್ತದೆ. ನನ್ನನ್ನು ದೊಡ್ಡದಾಗಿ ಬೆನ್ನುತಟ್ಟಿದ್ದೀರ. ಆದರೆ ನಾನು ಸುಮ್ಮನೆ ಕೂತಿಲ್ಲ. ನಾನು ರಿಲ್ಯಾಕ್ಸ್ ಆಗುತ್ತಿಲ್ಲ. ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇನೆ. ಸಾಧಾರಣವಾದ ಕೆಲಸ ಮಾಡಲು ನನಗೆ ಇಷ್ಟವಿಲ್ಲ, ಎಲ್ಲರೂ ಹೆಮ್ಮೆ ಪಡುವಂತಹ ಕೆಲಸವನ್ನೇ ಮಾಡುತ್ತೇನೆ ಎಂದು ಯಶ್ ಮಾತನಾಡಿದ್ದಾರೆ.
ಖಂಡಿತಾ ಸಿನಿಮಾ ಬಗ್ಗೆ ಅಪ್ಡೇಟ್ ಕೊಡುತ್ತೀನಿ. ಎಲ್ಲ ಊಟ ರೆಡಿಯಾದ ಮೇಲೆ ಬಡಿಸಿದರೇನೆ ಚೆಂದ. ಅರ್ಧಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆಯುವುದು ಸರಿ ಹೋಗುವುದಿಲ್ಲ. ನೀವೆಲ್ಲರೂ ಹೆಮ್ಮೆ ಪಡುವಂತಹ ಕೆಲಸ ಮಾಡುತ್ತೀನಿ ಎಂದು ಯಶ್ ಖುಷಿಯಿಂದ ಮಾತನಾಡಿದ್ದಾರೆ.